ಮೋಂತಿಮಾರು ದೇವಳದಲ್ಲಿ ಶ್ರೀ ಮಹಾಪವಮಾನ ಯಾಗದ ಸಂಪನ್ನ,ಸಾವಿರಾರು ಸಂಖ್ಯೆಯಲ್ಲಿ ಭಗವದ್ಬಕ್ತರ ಭಾಗಿ
ಬಂಟ್ವಾಳ: ತಾಲೂಕಿನ ಮಂಚಿಗ್ರಾಮದ ಶ್ರೀ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಾನಿಧ್ಯದಲ್ಲಿ ಭಾನುವಾರ ಶ್ರೀ ಮಹಾಪವಮಾನ ಯಾಗ,ಶ್ರೀ ರಾಮತಾರಕ ಯಜ್ಞ, ಸಾಮೂಹಿಕಗೋಪೂಜೆಯ ಧರ್ಮಜಾಗೃತಿ ಸಭೆಯು ಸಂಭ್ರಮದಿಂದ ಸಂಪನ್ನಗೊಂಡಿತು.

ವಿಶ್ವ ಹಿಂದೂ ಪರಿಷತ್,ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಂಚಿ ಘಟಕ ,ಕಲ್ಲಡ್ಕ ಪ್ರಖಂಡ,ಶ್ರೀ ಮಹಾಪವಮಾನಯಾಗ ಸಮಿತಿ-2025 ಇದರ ಸಹಯೋಗದಲ್ಲಿ ಮಾಜಿ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀಮಹಾಪವಮಾನಯಾಗ, ,ಶ್ರೀ ರಾಮತಾರಕ ಯಜ್ಞ, ಸಾಮೂಹಿಕ ಗೋಪೂಜೆಯ ನೆರವೇರಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ,ಡಾ.ಕಮಲಾ ಪ್ರಭಾಕರ ಭಟ್ ದಂಪತಿ ದೀಪೋಜ್ವನೆಗೈಯುವ ಮೂಲಕ ಪವಮಾನ ಪಾರಾಯಣ, ಶ್ರೀರಾಮತಾರಕ ಯಜ್ಞ ಹಾಗು ಯಾಗಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಯಾಗ ಸಮಿತಿ ಅಧ್ಯಕ್ಷ ವಿಕಾಸ್ ಕುಮಾರ್ ಪಿ., ಮೋಂತಿಮಾರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಸ್.ಅರ್.ಸತೀಶ್ಚಂದ್ರ ಹಾಗೂ ಯಾಗ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿ.ಹಿ.ಪ. ಮಂಚಿ ಘಟಕದ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಅವರು ಯಾಗದ ಯಜಮಾನರಾಗಿ ಕಾರ್ಯ ನಿರ್ವಹಿಸಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರುಗಳಾದ ಡಾ.ವೈ.ಭರತ್ ಶೆಟ್ಟಿ,ರಾಜೇಶ್ ನಾಯ್ಕ್ ಉಳಿಪಾಡಿ,ವಿ.ಹಿಂ.ಪ.ನ ಪ್ರಾಂತಕಾರ್ಯದರ್ಶಿ ಶರಣ್ ಪಂಪ್ ವೆಲ್ ,ರಾ.ಸ್ವ.ಸೇ.ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್,ಕೈರಂಗಳ ಅಮೃತಧಾರ ಗೋಶಾಲೆಯ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್,ವಿ.ಹಿ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ,ಮಾಜಿ ಶಾಸಕ ರುಕ್ಮಯ ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ಸಂತೋಷ್ ಕುಮಾರ್ ಬೋಳಿಯಾರ್,ಮಾಧವ ಮಾವೆ,ರಾಮದಾಸ್ ಬಂಟ್ವಾಳ,ಸುಲೋಚನಾ ಜಿ.ಕೆ.ಭಟ್, ಮೋನಪ್ಪ ದೇವಸ್ಯ, ಚೆನ್ನಪ್ಪ ಆರ್ ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ,ಪುರುಷೋತ್ತಮ ಶೆಟ್ಟಿ ವಾಮದಪದವು ಮೊದಲಾದವರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.



