ಶ್ರೀ ಕ್ಷೇತ ಪೊಳಲಿಯಲ್ಲಿ ದೊಡ್ಡರಂಗ ಪೂಜೆ, ತುಪ್ಪದ ದೀಪೋತ್ಸವ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ದೊಡ್ಡರಂಗ ಪೂಜೆ, ಬಲಿ ಉತ್ಸವ, ಗೋಪೂಜೆ, ತುಪ್ಪದ ದೀಪೋತ್ಸವ ಅ.೨೦ರಿಂದ ಅ. ೨೨ ರ ಬುಧವಾರದವರೇಗೆ ನಡೆಯಿತು.

ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ‍್ಸ್ ವತಿಯಿಂದ ಆರನೇ ವರ್ಷದ ತುಪ್ಪದ ದೀಪೋತ್ಸವ ಹಾಗೂ ಬಜನೆ, ಕುಣಿತ ಭಜನೆ ಮೆರುಗು ನೀಡಿತು.

ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿಗಳು ಹಾಗೂ ಮಾಧವ ಭಟ್, ನಾರಯಣ ಭಟ್, ಪರಮೇಶ್ವರ ಭಟ್, ಕೆ.ರಾಮ್ ಭಟ್ ನೇತ್ರತ್ವದಲ್ಲಿ ಪೂಜಾ ವಿದಿ ವಿಧಾನಗಳು ನೆರವೇರಿತು.ಕ್ಷೇತ್ರದ ತಂತ್ರಿಗಳಾದ ವೆಂಕಟೇಶ್ ತಂತ್ರಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಚೇರಾ ಸೂರ್ಯನಾರಾಯಣ ರಾವ್, ಅರುಣ್ ಆಳ್ವ ಉಳಿಪಾಡಿಗುತ್ತು, ಉದಯ ಆಳ್ವ ಉಳಿಪಾಡಿಗುತ್ತು,ಕೃಷ್ಣಕುಮಾರ್ ಪೂಂಜ ,ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ದೇವಳದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಉಪಸ್ಥಿತರಿದ್ದರು.


ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸತ್ಯಜಿತ್ ಸುರತ್ಕಲ್, ಅವಿನಾಶ್ ಸುವರ್ಣ, ಮಾದುಕೋಡಿ ವಿಜಯ ಸುವರ್ಣ ಗುರೂಜಿ, ಬೆಂಜನಪದವು ಕೊರಗಜ್ಜ ಕಟ್ಟೆ ಸಾನಿಧ್ಯದ ವಿಜಯ, ಚಂದ್ರಶೇಖರ್ ಭಂಡಾರಿ, ವೆಂಕಟೇಶ್ ನಾವಡ ಪೊಳಲಿ, ಭುವನೇಶ್ ಪಚಿನಡ್ಕ,ಚಂದ್ರಹಾಸ ಪಲ್ಲಿಪಾಡಿ, ಸುಕೇಶ್ ಚೌಟ, ಪ್ರಸಾದ್ ಗರೋಡಿ ಹಲಾವಾರು ಗಣ್ಯರು ಭಾಗವಹಿಸಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ‍್ಸ್ ವತಿಯಿಂದ ನಡೆದ ಸಂಭ್ರಮದ ತುಪ್ಪದ ದೀಪೋತ್ಸವಕ್ಕೆ ಶುಭಹಾರೈಸಿದರು.

ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ‍್ಸ್ ಇದರ ಪ್ರಮುಕರಾದ ಸಂತೋಷ್ ಶೆಟ್ಟಿ ಪೊಳಲಿ ಹಾಗೂ ಅಬಿಮಾನಿಗಳು ಹಣತೆ ದೀಪ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.



