ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಪ್ರತಿಮೆಗಳಿಗೆ ಪುಷ್ಪಾ೯ಚರಣೆ
ಬಂಟ್ವಾಳ: ಬಿ.ಸಿ.ರೋಡ್‌ನ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಮಂಗಳವಾರ ಪೊಲೀಸ್ ಹುತಾತ್ಮ ದಿನದ ಪ್ರಯುಕ್ತ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ತೆರಳಿ ಪೋಲಿಸ್ ಹುತಾತ್ಮರ ಪ್ರತಿಮೆಗಳಿಗೆ ಪುಪ್ಪಾ೯ಚನೆ ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸುವ ಮೂಲಕ ಆಚರಿಸಿದರು.

ಮಂಗಳೂರು ಪೋಲಿಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರನ್ನು ಭೇಟಿಯಾದ ವಿದ್ಯಾರ್ಥಿಗಳು ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಶಾಲೆಯ ಚಟುವಟಿಕೆ ಹಾಗೂ ಪರಿಚಯವನ್ನು ಮಾಡಿದರು.
ಶಾಲಾ ಪ್ರಾಂಶುಪಾಲರಾದ ಗಿರೀಶ್ ಕಾಮತ್ ಹಾಗೂ ಉಪ ಪ್ರಾಂಶುಪಾಲರಾದ ಅನಿಲ್ ನಾಯ್ಕ ಆಯುಕ್ತರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.
ಡಿಸಿಪಿಯವರಾದ ಮಿಥುನ್ ಎಚ್.ಎನ್. ಎಸಿಪಿಯವರಾದ ಗೀತಾ ಕುಲಕರ್ಣಿ ಯವರನ್ನು ಬೇಟಿ ಮಾಡಿದ ವಿದ್ಯಾರ್ಥಿಗಳು ಪೊಲೀಸ್ ಕಂಟ್ರೋಲ್ ಕೊಠಡಿ, ಸೈಬರ್ ಕ್ರೈಂ ಕೊಠಡಿ, ಟ್ರಾಫಿಕ್ ಮ್ಯಾನೇಜ್ ಮೆಂಟ್ ಕಛೇರಿ, ಕ್ರೈಂ ರೆಕಾರ್ಡ್ ಕೊಠಡಿಗಳನ್ನು ವೀಕ್ಷಿಸಿದರು. ಈಸಂದರ್ಭ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಿತವಚನಗಳನ್ನಿತ್ತು ಅಭಿನಂದಿಸಿದರು.
ವಿದ್ಯಾರ್ಥಿಗಳು ಪೊಲೀಸ್ ಹುತಾತ್ಮರ ದಿನದ ಬಗ್ಗೆ ಭಾಷಣ ಹಾಗೂ ಹಾಡುಗಳನ್ನು ಹಾಡಿ ಹುತಾತ್ಮ ಪೋಲಿಸರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅಧ್ಯಾಪಕರಾದ ಉನ್ನದ, ಸಫಾಆಯನಾ, ಶದೀದಾ, ಅಸಿಫಿಯಾ ಹಾಜರಿದ್ದರು



