ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ  ಸಹಯೋಗದಲ್ಲಿ “ಚರಿತ್ರೆ”  ಹಾಗೂ “ಭಾರತೀಯ ಶೌರ್ಯ ಪರಂಪರೆ” ಎಂಬ ಶೀರ್ಷಿಕೆಯಡಿಯಲ್ಲಿ ತೃತೀಯ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 ಅಂತಿಮ ಪದವಿ ವಿಭಾಗದ ವಿದ್ಯಾರ್ಥಿಗಳು ಶ್ರೀರಾಮ ವಿದ್ಯಾಕೇಂದ್ರ ನಡೆದು ಬಂದ ಹಾದಿಯನ್ನು  ಪ್ರದರ್ಶಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾರತದ ಶೌರ್ಯ ಪರಂಪರೆಯ ವಿಚಾರದಲ್ಲಿ ರಾಣಿ ಅಬ್ಬಕ್ಕ ಹಾಗೂ ಆಪರೇಷನ್ ಸಿಂಧೂರದ  ಪ್ರದರ್ಶನ ನೀಡಿದರು. 

ಕಾಲೇಜು ಪ್ರಾಚಾರ್ಯ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಸಹ ಮುಖ್ಯೋಪಾಧ್ಯಾಯ  ಸುಮಂತ್ ಆಳ್ವ ಹಾಗೂ ಪ್ರಾಥಮಿಕ ವಿಭಾಗದ ಆಂಗ್ಲಬಾಷಾ ಶಿಕ್ಷಕಿ  ರಾಜೇಶ್ವರಿ ಮಾತಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಸಾಂಸ್ಕೃತಿಕ ಸಂಘದ ನಿರ್ದೇಶಕಿ  ಸಂಧ್ಯಾಕುಮಾರಿ ಹಾಗೂ ಸಹ ನಿರ್ದೇಶಕಿ ಕು. ಪ್ರಜ್ಞಾಶ್ರೀ ವೇದಿಕೆಯಲ್ಲಿದ್ದರು.  ವಿದ್ಯಾರ್ಥಿನಿಯರಾದ ಕು. ಶರಣ್ಯಶ್ರೀ ಸ್ವಾಗತಿಸಿ, ಕು. ಚೈತನ್ಯ ವಂದಿಸಿದರು, ಕು. ದಿವ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *