ಗಿರಿಗುಡ್ಡೆಯಲ್ಲಿರುವ ಹಿಂದುಳಿದ ವರ್ಗಗಳ ಬಾಲಜರ ಹಾಸ್ಟೆಲ್ ಗೆ ತಹಶೀಲ್ದಾರ್ ದಿಢೀರ್ ಭೇಟಿ
ಬಂಟ್ವಾಳ: ಇಲ್ಲಿನ ಗಿರಿಗುಡ್ಡೆಯಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿರುವ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಬಂಟ್ವಾಳ ತಹಶಿಲ್ದಾರ್ ಮಂಜುನಾಥ್ ಅವರು ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಹಾಸ್ಟೆಲ್ ನ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ತಹಶೀಲ್ದಾರರು ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.ಆಹಾರದ ಗುಣಮಟ್ಟದ ಕುರಿತಾಗಿಯು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಅವರು ನಿಗದಿಯಂತೆ ಆಹಾರಗಳನ್ನು ಪೂರೈಸಲಾಗುತ್ತಿದೆಯಾ ಎಂದು ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ವಿದ್ಯಾರ್ಥಿಗಳ ಆಹಾರ ಹಾಗೂ ಇತರೆ ವಸ್ತುಗಳ ದಾಸ್ತಾನು ಕೊಠಡಿಗೂ ಭೇಟಿ ನೀಡಿ ಅಲ್ಲಿನ ಸ್ವಚ್ಚತೆಯನ್ನು ಪರಿಶೀಲಿಸಿದರಯ.
ಕಂದಾಯ ನಿರೀಕ್ಷಕ ಜೆ.ಜನಾರ್ದನ, ಬಂಟ್ವಾಳ ಕಸ್ಬಾ ಗ್ರಾಮ ಕರಣಿಕ ವಿ.ಎ.ಕಾರ್ತಿಕ್,ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ನರಸಿಂಹ ಭಟ್ ಎಚ್, ಸೂಪರಿಡೆಂಟ್ ಸುಧಾಕರ್ ಸಿ.ಎಸ್, ಪ್ರಥಮ ದರ್ಜೆ ಸಹಾಯಕ ಹಮೀದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಭುವನೇಶ್ವರಿ, ಅತಿಥಿ ಉಪನ್ಯಾಸಕಿ ಜಾರ್ಜ್ ಜಾನಿ ಉಪಸ್ಥಿತರಿದ್ದರು.



