ಮುಂಬಯಿ: ಭಾರತದ ‘ಐರನ್ ಮ್ಯಾನ್’ ನಾಮಾಂಕಿತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ವರ್ಷಂಪ್ರತಿ ಜಲಜಾ ಚಾರಿಟೇಬಲ್ ಫೌಂಡೇಶನ್ (ಮುಂಬಯಿ) ಆಯೋಜಿಸುತ್ತಿರುವಂತೆ ಈ ಬಾರಿ ಎಂಟನೇ ವಾರ್ಷಿಕ ಸರ್ದಾರ್ ಪಟೇಲ್ : ರನ್ ಫಾರ್ ಯುನಿಟಿ-2025 ಮ್ಯಾರಥಾನ್ ಇಂದಿಲ್ಲಿ ರವಿವಾರ ಪೊವಾಯಿಯಲ್ಲಿ ನಡೆಸಲ್ಪಟ್ಟಿತು.

ಉತ್ತಮ ಲೋಕ ನಿರ್ಮಾಣದ ದಿಸೆಯಲ್ಲಿ ಒಂದು ಹೆಜ್ಜೆ ಧ್ಯೇಯವಾಣಿಯೊಂದಿಗೆ ವಾರ್ಷಿಕವಾಗಿ ಹಮ್ಮಿಕೊಳ್ಳುವಂತೆ ಈ ಬಾರಿ ಸರ್ದಾರ್ ಪಟೇಲ್ ಏಕತಾ ಮ್ಯಾರಥಾನ್-೨೦೨೫ನ್ನು ಪೊವಾಯಿ ಹಿರಾನಂದನಿ ಡಿ.ಮಾರ್ಟ್‌ನ ಮುಂಭಾಗದ ಸಿಟಿಪಾರ್ಕ್ ಬಿಲ್ಡಿಂಗ್ ಆವರಣದಲ್ಲಿ ಮುಂಜಾನೆ ೫:೩೦ ಗಂಟೆಗೆ ಉದ್ಘಾಟಿಸಲ್ಪಟ್ಟಿತು. ಉತ್ತರ ಪ್ರದೇಶದ ಸಂಸದ ಜಗದಾಂಬಿಕಾ ಪಾಲ್ (ದೊಮರಿಯಗಂಜ್ ಲೋಕಸಭಾ ಕ್ಷೇತ್ರ) ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ನಂತರ ಹಸಿರು ನಿಶಾನೆಗೈದು (ಫ್ಲ್ಯಾಗ್‌ಆಫ್) ಮ್ಯಾರಥಾನ್‌ಗೆ ಚಾಲನೆಯನ್ನಿತ್ತು ಎಲ್ಲಾ ಪಾಲುದಾರರಿಗೆ ಪ್ರೇರಣಾದಾಯಕ ಮಾತುಗಳನ್ನಾಡಿ ಸ್ಪರ್ಧಾಥಿಗಳಿಗೆ ಉತ್ತೇಜನ ನೀಡಿದರು.

ಬಳಿಕ ಡಿ.ಮಾರ್ಟ್‌ನಿಂದ ಆರಂಭಿಸಿ ಫಾರೆಸ್ಟ್ ಪಾರ್ಕ್, ಚಿತ್ರಾರ್ಥ್ ಸ್ಟುಡಿಯೋ, ಚಂದ್ರಭಾನ್ ಶರ್ಮಾ ಕಾಲೇಜ್ ಮಾರ್ಗದ ಮೂಲಕ ಸಾಗಿ ಮೆಲುಹಾ ದ ಫರ್ನ್ ಎಕೋಟೆಲ್ ಹೋಟೆಲ್, ಸ್ಯಾಮ್ಸಂಗ್ ಸ್ಮಾರ್ಟ್ ಕಫೆ, ಹೆಚ್.ಇ ಸೆಂಟರ್, ಬಿ.ಎಂ.ಸಿ ನಿರ್ವಾಣ್ ಪಾರ್ಕ್, ಕನಾಕಿಯಾ ಸಿಲಿಕಾನ್ ವ್ಯಾಲಿ, ಸೆಂಟ್ರಲ್ ಅವೆನ್ಯೂ ಮೂಲಕ ಸುಮಾರು 10 ಕಿಲೋ ವಿಟರ್ ಓಟದೊಂದಿಗೆ ಮತ್ತೆ ಡಿ.ಮಾರ್ಟ್ ಕೇಂದ್ರದಲ್ಲೇ ಮ್ಯಾರಥಾನ್ ಕೊನೆಗೊಂಡಿತು.

ರಾಜ್ಯಸಭಾ ಸಂಸದ ಸತ್ನಮ್ ಸಿಂಗ್ ಸಂಧು,  ಶಾಸಕ ಸಂಜಯ ಉಪಾಧ್ಯಾಯ (ಬೋರಿವಿಲಿ), ಯುಪಿ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, ಮುಂಬಯಿ ಬಿಜೆಪಿ ಉತ್ತರ ಮಧ್ಯ ಜಿಲ್ಲಾಧ್ಯಕ್ಷ ವೀರೇಂದ್ರ ಮ್ಹಾತ್ರೆ, ಉದ್ಯೋಗಪತಿಗಳು, ಇನ್ನಿತರ ಸೆಲೆಬ್ರೆಟಿಗಳು ಮತ್ತು ಗಣ್ಯರನೇಕರು, ಮಹಾನಗರದ ಅನೇಕಾನೇಕ ಬುದ್ಧಿಮಾಂಧ್ಯ, ಅಪಾಂಗ ಸಂಸ್ಥೆಗಳ ಕ್ರೀಡಾಸಕ್ತತರು ಸೇರಿದಂತೆ ಹಿರಿಯ ನಾಗರಿಕರು, ಪುಟಾಣಿಗಳು ಏಕತೆಗಾಗಿನ ಈ ಓಟದಲ್ಲಿ ಪಾಲ್ಗೊಂಡಿದ್ದರು. ಈ ವರ್ಷ ೧೦ ಕಿ.ಮೀ ಮತ್ತು ೫ ಕಿ.ಮೀ ಟೈಮ್ಡ್ ರನ್ ಹಾಗೂ ೩ ಕಿ.ಮೀ ಫ್ಯಾಮಿಲಿ ಫನ್ ರನ್ ವಿಭಾಗಗಳಾಗಿಸಿದ್ದ ಮ್ಯಾರಥಾನ್‌ನಲ್ಲಿ ಸುಮಾರು ೫೦೦೦ ಮಂದಿ ಓಟದಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 7.15ರ ಹೊತ್ತಿಗೆ ಸಮಾರೋಪ ಕಾರ್ಯಕ್ರಮ ನಡೆಸಲಾಗಿದ್ದು ಉಪಸ್ಥಿತ ಅತಿಥಿಗಳನ್ನೊಳಗೊಂಡು ಜಲಜಾ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಅಡ್ವಕೇಟ್ ಜಯಪ್ರಕಾಶ್ ಶೆಟ್ಟಿ, ಟ್ರಸ್ಟಿಗಳಾದ ಪ್ರೊ| ಶಿಲ್ಪಾ ಜೆ.ಶೆಟ್ಟಿ ಮಹೇಶ್ ಶೆಟ್ಟಿ ಕಲ್ಯಾಣ್ಫುರ್ ಮತ್ತು ಸುಜತಾ ಎಂ.ಶೆಟ್ಟಿ ಸೂಡ ಸೇರಿದಂತೆ ಗಣ್ಯಾಥಿಗಳು ವಿಜೇತರಿಗೆ ಬಹುಮಾನ ವಿತರಣೆಗೈದು ಅಭಿನಂದಿಸಿದರು.

ಪ್ರಾತಃಕಾಲ 5.30 ಗಂಟೆಗೆ ಸ್ಪರ್ಧಾಥಿಗಳ ಹಾಜರಾತಿ ಪ್ರಾರಂಭಗೊಂಡ ಬಳಿಕ ಗಣ್ಯರಿಗೆ  ಬಿಬ್, ಕಿಟ್‌ಗಳ ವಿತರಣೆ ಬಳಿಕ, ವಾರ್ಮ್ ಅಪ್ ಮತ್ತು ಜುಂಬಾ, ಲೈನ್ ಅಪ್, ಫ್ಲಾಗ್ ಆಫ್ ನಡೆಸಲಾಗಿ ನಡೆಸಲಾದ ಬಳಿಕ ಆಯೋಜಕರ ನಿಬಂಧನೆಗಳು ಮತ್ತು ನಿಯಮಗಳಂತೆ ಮ್ಯಾರಥಾನ್ ಸಾಗಿತು. ವಿದ್ಯಾಥಿಗಳು ಮತ್ತು ಹಿರಿಯ ನಾಗರಿಕರಿಗೆ ಮತ್ತು ಅವಶ್ಯಕರಿಗೆ ವ್ಹೀಲ್ ಚೇರ್‌ಗಳೊಂದಿಗೆ ವಿಶೇಷ ಅವಕಾಶ ನೀಡಲಾಗಿದ್ದು, ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ಪೋಷಕರೊಂದಿಗೆ ಜೊತೆಗೂಡಿ ಓಡಿ ಮ್ಯಾರಥಾನ್ ಸಂಭ್ರಮಿಸಿದರು. ಕೊನೆಯಲ್ಲಿ ಇ-ಸರ್ಟಿಫಿಕೆಟ್, ಪದಕಗಳನ್ನು ವಿತರಿಸಲಾಯಿತು.

ಅಡ್ವಕೇಟ್ ಜಯಪ್ರಕಾಶ್ ಶೆಟ್ಟಿ ಪ್ರಸ್ತಾವನೆಗೈದ ಸ್ವಾಗತಿಸಿದರು. ಪೂಜಾ ಯಾದ್ವ್, ಸೌರಭ್ ಘೋಷ್, ಮನೋಜ್ ದುಬೆ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಶೆಟ್ಟಿ ಕಲ್ಯಾಣ್ಫುರ್ ವಂದನಾರ್ಪಣೆಗೈದರು

ಚಿತ್ರ /  ಮಾಹಿತಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *