ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್‌ನ ತೃತೀಯ ವಾರ್ಷಿಕ ಮಹಾಸಭೆಹಳೆ ವಿದ್ಯಾಥಿಗಳ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಅವಶ್ಯ : ಸುರೇಂದ್ರ ಎ.ಪೂಜಾರಿ
ಮುಂಬಯಿ: ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾಥಿಗಳ ಸ್ವಸ್ಥತೆಯ ರಕ್ಷಣೆಗಾಗಿ ವೈದ್ಯಕೀಯ ನೆರವು ಯೋಜನೆ ಚಾಲ್ತಿಗೆ ತರಬೇಕು ಹಾಗೂ ಹಳೆ ವಿದ್ಯಾಥಿಗಳ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಆಥಿಕ ಅನುದಾನ ದೊರೆಯುವಂತೆ ನಾವು ನಿರಂತರ ಪ್ರಯತ್ನ ಮಾಡಬೇಕು, ನಮ್ಮ ಸಂಸ್ಥೆಯ ಕೆಲಸ ಕಾರ್ಯಗಳು ರಾಷ್ಟ್ರದ ಎಲ್ಲಾ ರಾತ್ರಿ ಶಾಲೆಗಳಿಗೆ ಮಾತ್ರವಲ್ಲ ಎಲ್ಲಾ ವಿದ್ಯಾಲಯಗಳಿಗೂ ಮಾದರಿಯಾಗಬೇಕು ಎಂದು ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್‌ನ ಅಧ್ಯಕ್ಷ ಸುರೇಂದ್ರ ಎ.ಪೂಜಾರಿ ತಿಳಿಸಿದರು.

ಕಳೆದ ಭಾನುವಾರ ಪೂರ್ವಾಹ್ನ ಮುಂಬಯಿ ಕೋಟೆಯಲ್ಲಿನ (ಫೋರ್ಟ್) ಎಲ್‌ಐಸಿ ಕ್ಯಾಂಟೀನ್‌ನ ಸಭಾಗೃಹದಲ್ಲಿ ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾಥಿ ಸಂಘದ (ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ) ತೃತೀಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸುರೇಂದ್ರ ಪೂಜಾರಿ ಮಾತನಾಡಿದರು.

ಬೃಹನ್ಮುಂಬಯಿಯಲ್ಲಿ 1939ರಲ್ಲಿ ಸ್ಥಾಪನೆಯಾಗಿದ್ದ ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಸಮಾಜ ಸೇವಾ ವಿಸ್ತರಣೆಗಾಗಿ 2022ರಲ್ಲಿ ಸ್ಥಾಪಿತ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ ಸದಸ್ಯರನ್ನು ಸ್ವಾಗತಿಸಿ ಸಭೆಯ ಸುತ್ತೋಲೆ ವಾಚಿದರು. ಬಳಿಕ ಜತೆ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಅವರು ದ್ವಿತೀಯ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಮಂಡಿಸಿದರು. ಕೋಶಾಧಿಕಾರಿ ಟಿ.ವಿ ಪೂಜಾರಿ ಗತ ವಾರ್ಷಿಕ ಆಯಾ ವ್ಯಯ ಮತ್ತು ತಪಾಶಿಲು ಲೆಕ್ಕಪಟ್ಟಿಯನ್ನು ಸಭೆ ತಿಳಿಸಿದರು.

ಸಂಸ್ಥೆಯ ಕಾರ್ಯಚಟುವಟಿಕೆಗಾಗಿ ಸ್ವಂತ ಜಾಗ ಖರೀದಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮತ್ತು ಧನ ಸಂಗ್ರಹಣೆ ಬಗ್ಗೆ ಚರ್ಚೆ ನಡೆಸಲ್ಪಟ್ಟಿದ್ದು ಎಲ್ಲರೂ ಒಮ್ಮತದಿಂದ ತಮ್ಮ ಸಮ್ಮತಿ ನೀಡಿದರು. ಕಚೇರಿ ಖರೀದಿ ನಿಧಿ ಸಂಗ್ರಹ ಸಮಿತಿಯ ಕಾರ್ಯಧ್ಯಕ್ಷ ಮಂಜುನಾಥ್ ಪೂಜಾರಿ ಅವರು ನಿಧಿ ಸಂಗ್ರಹ ಅಗತ್ಯತೆ ಬಗ್ಗೆ ಒತ್ತು ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಯಶವಂತ ಪೂಜಾರಿ, ಜತೆ ಕಾರ್ಯದರ್ಶಿ ಜಯರಾಮ್ ಪೂಜಾರಿ ಆಸೀನರಾಗಿದ್ದು ಮಂದಾರ ಹೆಗ್ಡೆ, ಪಾವ್ಲ್ ಮಾಸ್ಕರೇನ್ಹಾಸ್, ಜಯರಾಮ್ ಪೂಜಾರಿ, ವಸಯಿ, ಹರೀಶ್ ಪೂಜಾರಿ, ಅಡ್ವ್ವಕೇಟ್ ಸುಂದರ ಜೆ.ಶೆಟ್ಟಿ, ಸದಾನಂದ ಶೆಟ್ಟಿ, ಸತೀಶ್ ಬೆಳ್ಚಡ, ಸಚ್ಚಿದಾನಂದ ನಾಯ್ಕ್, ಶಿವಾನಂದ ಬಂಗೇರ, ರತ್ನಕರ್ ಪೂಜಾರಿ, ಸೀತಾರಾಮ್ ದೇವಾಡಿಗ, ದಿನೇಶ್ ಹೆಮ್ಮಾಡಿ, ಬಾಬು ಡಿ.ಶೆಟ್ಟಿ, ಶಂಕರ್ ಶೆಟ್ಟಿ, ಭಾಸ್ಕರ್ ಜತ್ತನ್, ರಮೇಶ್ ಕೆ ಪೂಜಾರಿ, ವಿಜಯ ಪೂಜಾರಿ, ರಾಘು ಪೂಜಾರಿ, ಪಾಂಡುರಂಗ ಮೂಲ್ಯ, ಸುರೇಶ್ ಪೂಜಾರಿ, ಪ್ರಸಾದ್ ಶೆಟ್ಟಿ, ಜಯರಾಮ್ ಪೂಜಾರಿ ತಮ್ಮ ಅಭಿಪ್ರಾಯ ತಿಳಿಸಿ ಸಂಸ್ಥೆಯ ಸರ್ವೋನ್ನತಿಗೆ ಹಾರೈಸಿದರು. ಅಶೋಕ ಎಸ್.ಸುವರ್ಣ ವಂದಿಸಿದರು.



