ತುಂಬೆ: ಗ್ರಾ ಪಂ ವ್ಯಾಪ್ತಿಯಲ್ಲಿ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರಕ್ಕೆ ಚಾಲನೆ
ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ಟಾಳ ತಾಲೂಕು,ತುಂಬೆ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ತುಂಬೆ ಗ್ರಾ ಪಂ ಕಛೇರಿ ಅವರಣದಲ್ಲಿ ಚಾಲನೆ ನೀಡಲಾಯಿತು.

ವೈದ್ಯಧಿಕಾರಿಗಳ 3 ತಂಡಗಳು ಗ್ರಾಮದ ವಿವಿಧ15 ಕಡೆಗಳಲ್ಲಿ ಶಿಬಿರವನ್ನು ನಡೆಸಿದರು.ಈ ಸಂದರ್ಭದಲ್ಲಿ ತುಂಬೆ ಗ್ರಾ ಪಂ ಅಧ್ಯಕ್ಷೆ ಜಯಂತಿ ಕೇಶವ, ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಸದಸ್ಯರಾದ ಪ್ರವೀಣ್ ಬಿ.ತುಂಬೆ, ಇಬ್ರಾಹಿಂ ವಳವೂರು, ಮಹಮ್ಮದ್ ಝಹೂರ್ , ಅರುಣ್ ಕುಮಾರ್ , ಜಯಂತಿ ನಾಗೇಶ್, ಪಶು ವೈದ್ಯಧಿಕಾರಿ ಡಾ. ಕಾರ್ತಿಕ್ ಹಾಗೂ ಸಿಬ್ಬಂದಿಗಳು,ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವುಲಾಲ್ ಚವ್ಹಾಣ್ , ಲೆಕ್ಕ ಸಹಾಯಕಿ ಚಂದ್ರಕಲಾ ಜಿ , ಪಶುಸಖಿ ಬಬಿತ ,ಎಲ್ ಸಿ ಆರ್ ಪಿ ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.



