Published On: Sun, Oct 12th, 2025

ತುಂಬೆ – ಪುದು ಉಪ ಆರೋಗ್ಯ ಕೇಂದ್ರಕ್ಕೆ ಡಾ. ಪದ್ಮನಾಭ ಕಾಮತ್ ರಿಂದ ಇಸಿಜಿ ಉಪಕರಣ ಹಸ್ತಾಂತರ

ಬಂಟ್ವಾಳ: ಕೆಎಂಸಿ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ಅವರು ಶುಕ್ರವಾರ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ, ತುಂಬೆ ಗ ಮತ್ತು ಪುದು ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರಕ್ಕೆ ಹೃದಯಕ್ಕೆ ಸಂಬಂಧ ಪಟ್ಟ ತಪಾಸಣೆಗಾಗಿ “ಇಸಿಜಿ” ಉಪಕರಣವನ್ನು ಹಸ್ತಾಂತರಿಸಿ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮಸ್ಥರು ಈ ಉಪಕರಣದ ಸದುಪಯೋಗವನ್ನು  ಪಡೆದು ಕೊಳ್ಳುವಂತೆ ಮನವಿ ಮಾಡಿದರು.
ಮಾಜಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮತ್ತಿತರರು ಹಾಜರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter