ರಾಷ್ಟ್ರೀಯ ಸಂಸ್ಕಾರ ಶಿಬಿರ “ಉತ್ಥಾನ “ದಲ್ಲಿ ಸಾಮೂಹಿಕ “ದೀಪ ಪೂಜನ”
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿನಿಯರ ರಾಷ್ಟ್ರೀಯ ಸಂಸ್ಕಾರ ಶಿಬಿರ “ಉತ್ಥಾನ ” ದಲ್ಲಿ ಸಾಮೂಹಿಕ “ದೀಪ ಪೂಜನ” ಕಾರ್ಯಕ್ರಮ ನಡೆಯಿತು. ಪುರೋಹಿತರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಪೂಜನವನ್ನು ನೆರವೇರಿಸಿ ಮಾತನಾಡಿ, ದೀಪ ಜಗನ್ಮಾತೆಯ ಒಳ್ಳೆಯತನ, ಹೆಣ್ಣಿನ ಮಾತೃತ್ವ ಶಕ್ತಿಯ ಕಿರಣಗಳನ್ನು ಆರಾಧನೆ ಮಾಡುವ ತೇಜಸ್ಸು ದೀಪ ಎಂದು ತಿಳಿಸಿದರು.

ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ , ಆಡಳಿತ ಮಂಡಳಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.



