ಬಂಟ್ವಾಳ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಇದರ 8 ನೇ ವಾರ್ಷಿಕ ಜಿಲ್ಲಾ  ಮಹಾಸಭೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರಲ್ಲಿ ಮಂಗಳವಾರ ನಡೆಯಿತು.ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ‌ಶಾಮಿಯಾನ ಕೆಲಸಗಾರರು ನ್ಯಾಯಯುತವಾಗಿ ಕರ್ತವ್ಯ  ಮಾಡಿದರೆ ಯಶಸ್ಸು ಸಾಧ್ಯ,ಶಿಸ್ತು ನಿಯಮಗಳಿಗೆ ಬದ್ದವಾಗಿದ್ದಕೊಂಡು, ನಿಷ್ಠೆಯಿಂದ ದುಡಿದ ಒಂದು ಅಂಶವನ್ನು  ಸಂಘಕ್ಕೆ ನೀಡಿ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.


ಮುಂದಿನ ವರ್ಷದ ಒಳಗಾಗಿ ಸ್ವಂತ ಜಾಗದಲ್ಲಿ ಕಟ್ಟಡದ ನಿರ್ಮಿಸುವ  ಭರವಸೆಯಿತ್ತ ಅವರು ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ಯಾಚಿಸಿದರು.ಕಾನೂನು ಸಲಹೆಗಾರ ಜಯರಾಮ ರೈ ಮಾತನಾಡಿ, ಸಂಘಟನೆ ಎಂಬುದು  ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.ಆಪತ್ಕಾಲದ ಸಂದರ್ಭದಲ್ಲಿ ನೆರವು ನೀಡುವ ಶಕ್ತಿಯು ಸಂಘಟನೆಗಿದೆ ಎಂದರು


ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಲತೀಫ್, ಮಂಗಳೂರು ಘಟಕ ಅಧ್ಯಕ್ಷ ಬಾಲಕೃಷ್ಣ ಕದ್ರಿ, ಕಡಬ ಘಟಕ  ಅಧ್ಯಕ್ಷ ಪ್ರಮೋದ್  ರೈ, ವಿಟ್ಲ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮೂಡಬಿದಿರೆ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ಬೆಳ್ತಂಗಡಿ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಅಧ್ಯಕ್ಷ ರಾಮಕೃಷ್ಣ, ಬಂಟ್ವಾಳ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


  ಹಿರಿಯ ಸದಸ್ಯರಾದ ಚಂದ್ರಹಾಸ ಸುವರ್ಣ ವಿಟ್ಲ, ಗೋಪಾಲ ಕುಲಾಲ್ ಬಂಟ್ವಾಳ, ಜಿನರಾಜ್ ಜೈನ್ ಬೆಳ್ತಂಗಡಿ, ಪದ್ಮನಾಭ ಟಿ.ಮಂಗಳೂರು, ಸುಧಾಕರ ಹೆಗ್ಡೆ ಮೂಡಬಿದಿರೆ, ಸುರೇಶ್ ರೈ ಸೂಡಿಮುಳ್ಳು ಅವರನ್ನು ಗೌರವಿಸಲಾಯಿತು.


ಜಿಲ್ಲಾ ಕಾರ್ಯದರ್ಶಿ ಮ್ಯಾಕ್ಸಿಮ್‌ ಸ್ವಿಕೇರಾ ವಾರ್ಷಿಕ ವರದಿ ವಾಚಿಸಿದರು.ಕೋಶಾಧಿಕಾರಿ ನಿಶಿತ್ ಪೂಜಾರಿ ಲೆಕ್ಕ ಪತ್ರ ಮಂಡಿಸಿದರು.
ಜಿಲ್ಲಾ ಉಪಾಧ್ಯಕ್ಷರುಗಳಾದ ಸುಭಾಶ್ಚಂದ್ರ ಜೈನ್ ಸ್ವಾಗತಿಸಿ,ಕ್ಲೇವಿಯರ್ ಡಿ.ಸೋಜ ವಂದಿಸಿದರು.ಇಸ್ಮಾಯಿಲ್ ಬನಾರಿ ವಿಟ್ಲ,ರಾಜಶೇಖರ ಶೆಟ್ಟಿ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *