ರಿಕ್ಷಾ ಚಾಲಕ,ಮಾಲಕರ ಬಿಎಂಎಸ್ ಬಂಟ್ವಾಳ ಘಟಕದ ಮಹಾಸಭೆ
ಬಂಟ್ವಾಳ: ಅಟೋ ರಿಕ್ಷಾ ಚಾಲಕರ ಸಂಘ ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘ ದ.ಕ.ಇದರ ಬಂಟ್ವಾಳ ಘಟಕದ 37 ನೇ ವಾರ್ಷಿಕ ಮಹಾಸಭೆಯುಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆಯಿತು.

ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ಮೋಟಾರು ಮತ್ತು ಜನರಲ್ ಮಜ್ದೂರು ಸಂಘ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಕಾನೂನು ಸಲಹೆಗಾರರಾದ ಜಯರಾಮ ರೈ, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭ ಅನಾರೋಗ್ಯದಲ್ಲಿರುಚ ಸಂಘದ ಸದಸ್ಯರುಗಳಿಗೆ ಸಹಾಯಧನ ನೀಡಲಾಯಿತು.
ಸದಸ್ಯ ಶ್ರೀಕಾಂತ್ ಸ್ವಾಗತಿಸ, ವಂದಿಸಿದರು.ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.



