ಬಂಟ್ವಾಳ: ರಾ.ಹೆ.ಯ ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.), ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ತುಂಬೆ ಶ್ರೀರಾಮ ನಗರ ರಾಮಲ್ ಕಟ್ಟೆಯ ಶ್ರೀ ಶಾರದ ಸಭಾ ಭವನದಲ್ಲಿ” ಶ್ರೀ ಶಾರದಾಪೂಜೆಯ ರಜತ ಮಹೋತ್ಸವ” ಕ್ಕೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ರವರು ದೀಪ ಬೆಳಗಿಸಿ ರಜತಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದೂ ಸಮಾಜ ಮಾತ್ರ ವಿಶ್ವದ ಸರ್ವರಿಗೂ ಮಾತ್ರವಲ್ಲ ಸೃಷ್ಟಿಯ ಎಲ್ಲಾ ಜೀವರಾಶಿಗಳಿಗೆ ಒಳಿತನ್ನು ಬಯಸುತ್ತದೆ. ಸಮಾಜದಲ್ಲಿ ಶಾಂತಿ, ಸೌಹಾರ್ದ ಹಾಗೂ ಉದಾರತೆಯನ್ನು ತೋರುವ ಧರ್ಮವಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂದರು.

ಶ್ರೀ ಕನಪಾಡಿ ದೈವದ ಪಾತ್ರಿ ಧೂಮ ಮೂಲ್ಯ,ಮಜಿಲ ಗಡಿಕಾರ ವಿಶ್ವನಾಥ್ ಅಂಚನ್, ನಿವೃತ್ತ ಅಬಕಾರಿ ಅಧಿಕಾರಿ ಎಂ ಆರ್. ನಾಯರ್,ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಾಘವ ಬಂಗೇರ ಪೆರ್ಲಬೈಲು, ಕಾರ್ಯಧ್ಯಕ್ಷರಾದ ಜಗದೀಶ ಪೂಜಾರಿ, ಕೋಶಾಧಿಕಾರಿ ವಿನೋದ್ ಬೊಳ್ಳರಿ ಉಪಸ್ಥಿತರಿದ್ದರು.

ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು.ಸಂತೋಷ ಕೋಟ್ಯಾನ್ ಸ್ವಾಗತಿಸಿದರು. ರಮಾನಾಥ ಅಮೀನ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ರಜತವೀಣೆ ಸಮರ್ಪಣೆ:
ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ಶಾರದ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.ಬಳಿಕ ಶ್ರೀಕನಪಾಡಿ ದೈವದ ಪಾತ್ರಿ ಧೂಮ ಮೂಲ್ಯ ಅವರು
ಧ್ವಜಾರೋಹಣಗೈದರು.ಇದೇ ವೇಳೆ ಶಾರದೋತ್ಸವಕ್ಕೆ ರಜತ ಸಂಭ್ರಮದ ನೆನಪಿಗಾಗಿ ಸುಮಾರು 4.25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ” ರಜತ ವೀಣೆ”ಯನ್ನು ಶಾರದಮಾತೆಗೆ ಸಮರ್ಪಿಸಲಾಯಿತು.
