ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ(ಟಿಎಪಿಸಿಎಂಎಸ್)ದ ೨೦೨೫-೩೦ನೇ ಸಾಲಿನ ಆಡಳಿತ ಮಂಡಳಿಗೆ ಎಲ್ಲಾ ೧೫ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಕೆ.ರವೀಂದ್ರ ಕಂಬಳಿ ಅವರು ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮೋಹನ್ ಆಚಾರ್ಯ ಕೊಡಂಬೆಟ್ಟು ಆಯ್ಕೆಯಾಗಿದ್ದಾರೆ.ಸಹಕಾರ ಸಂಘಗಳ ಸಹಾಯಕ ನಿರ್ದೇಶಕಿ ತ್ರಿವೇಣಿ ರಾವ್ ಅವರು ಚುನಾವಣಾಽಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದ್ದಾರೆ. ನಿರ್ದೇಶಕರಾಗಿ ಪ್ರಮೋದ್‌ಕುಮಾರ್ ರೈ, ಜ್ಞಾನೇಶ್ವರ ಪ್ರಭು, ದಿನೇಶ್ ಪೂಜಾರಿ, ನಾರಾಯಣ ಪೂಜಾರಿ, ವೆಂಕಟೇಶ ನಾವಡ ಪೊಳಲಿ, ಜಯರಾಮ ಹಾಗೂ ತನಿಯಪ್ಪ ಗೌಡ ಅವರು ಸಹಕಾರಿ ಸಂಘಗಳಿAದ ಆಯ್ಕೆಯಾಗಿದ್ದು, ಕೃಷ್ಣಮೂರ್ತಿ, ರಾಮ ನಾಯ್ಕ್, ಶೀಲಾ, ಸವಿತಾ ಡಿಸೋಜ, ಉದಯಕುಮಾರ್, ಸಂತೋಷ್‌ಕುಮಾರ್ ಶೆಟ್ಟಿ ಬಿ ತರಗತಿಗಳಿಂದ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿ ಯು.ಧರ್ಮಪಾಲ ಭಂಡಾರಿಯವರು ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
