ಬಂಟ್ವಾಳ:ತಾಲೂಕಿನ ಮೂಡುಪಡುಕೋಡಿ ಸ.ಹಿ.ಉ.ಪ್ರಾ.ಶಾಲಾ ವಠಾರದಲ್ಲಿಶ್ರೀಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು ಇದರ ಅಶ್ರಯದಲ್ಲಿ ಸೋಮವಾರ ನಡೆದ ಶ್ರೀ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿಗುರುವಾಯನಕೆರೆ ಎಕ್ಸ್ ಎಲ್ ಪಿಯು ಕಾಲೇಜ್ ನ ಅಧ್ಯಕ್ಷ,ಶಿಕ್ಷಣ ತಜ್ಞ ಸುಮಂತ್ ಕುಮಾರ್ ಜೈನ್ ಅವರಿಗೆ “ಶಾರದಾತಿಲಕ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು,ಈ ಪ್ರಶಸ್ತಿ ನನ್ನ ಜವಬ್ದಾರಿಯನ್ನು ಹೆಚ್ಚಿಸಿದ್ದು,ಸಂಸ್ಥೆಯ ಸಿಬ್ಬಂದಿಗಳು,ಬೋಧಕರು,ಬೋಧಕೇತರರಿಗೆ ಪ್ರಶಸ್ತಿಯನ್ನು ಸಮರ್ಪಿಸಲಾಗುವುದು ಎಂದರು.ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದನ್ನು ಅಭಿವೃದ್ಧಿಗೊಳಿಸುವ ಮೂಲಕ ಉಳಿಸುವ ಕಾರ್ಯ ಶಾರದ ಸೇವಾ ಸಮಿತಿಯಿಂದ ನಡೆಯುತ್ತಿರುವುದು ಎಂದ ಅವರು ಅಭಿನಂದನೀಯವಾಗಿದೆ ಎಂದ ಅವರು ಮೆಡಿಕಲ್ ಅಥವಾ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಅಪೇಕ್ಷಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಿಂದ ಉಚಿತವಾಗಿ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದರು.
ಪ್ರಧಾನ ಭಾಷಣಗೈದಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು,ನ್ಯಾಯವಾದಿ ಶೈಲಜಾ ರಾಜೇಶ್ ಮಹಿಳೆಯನ್ನು ದೇವತಾ ರೂಪದಲ್ಲಿ ಕಾಣಲಾಗುತ್ತದೆ.ಹೆತ್ತವರು ಮಕ್ಕಳ ಕೈಗೆ ಮೊಬೈಲ್ ನೀಡದೆ ಅವರ ಚಲನವಲನ ಗಮನಿಸಿ ಮೌಲ್ಯಯುತ, ಸಂಸ್ಕಾರಯುತವಾದ ಶಿಕ್ಷಣ ನೀಡಿ ಸಮಾಜದ ಆಸ್ತಿಯನ್ನಾಗಿಸಬೇಕು ಎಂದರು.
ಶ್ರೀ ಶಾರದಾ ಸೇವಾ ಸಮಿತಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು ದ್ವೇಷ ಮರೆತು,ಎಲ್ಲರೂ ಪರಸ್ಪರ ಪ್ರೀತಿ,ವಿಶ್ವಾಸ,ಸಾಮರಸ್ಯದಿಂದ ಬಾಳುವಂತಾಗಬೇಕು ಎಂದರು.ಉಜಿರೆ ಜನಾರ್ಧನ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಗಂಗಾಧರ ರಾವ್ ಕೆವುಡೇಲು ಅಧ್ಯಕ್ಷತೆ ವಹಿಸಿದ್ದರು.
ಕಾವಳಪಡೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪಿ. ಆಮ್ಮು ರೈ ಹರ್ಕಾಡಿ,
ಯಕ್ಷಗಾನ ಕಲಾವಿದರಾದ ಚಂದ್ರಶೇಖರ ಭಟ್ ಕೊಂಕಣಾಜೆ ,ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಆಡಳಿತ ಮೊಕ್ತೇಸರರಾದ ಯೋಗೀಶ ಪೂಜಾರಿ ಕಡ್ತಿಲ,ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನಿಕಟಪೂರ್ವ ಅಧ್ಯಕ್ಷ,ರೋ। ಸುರೇಶ್ ಶೆಟ್ಟಿ,ಕರ್ಣಾಟಕ ಬ್ಯಾಂಕ್ ಪಿಲಿಮೊಗರು ಶಾಖಾ ಪ್ರಬಂಧಕರಾದ ಹರಿಕೃಷ್ಣ ನಾಯ್ಕ ಎಸ್.,ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ.ಜಗದೀಶ್ಚಂದ್ರ ಡಿ.ಕೆ.,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷೆ ಶಾಲಿನಿ ಯತೀಶ್ ಪೂಜಾರಿ,ಉದ್ಯಮಿ ಹರೀಂದ್ರ ಪೈ,ದ.ಕ.ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ,ಉದ್ಯಮಿ ಯೋಗೀಶ್ಪೂಜಾರಿ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಶಾರದ ಸೇವಾ ಟ್ರಸ್ಟ್ ನ ಉಪಾಧ್ಯಕ್ಷಶೇಖರಪೂಜಾರಿ ಅಗಲ್ದೋಡಿ, ಕೋಶಾಧಿಕಾರಿ ಸುಪ್ರಿತ್ ಜೈನ್ ಎಡ್ತೂರುಗುತ್ತು,ನಿರ್ದೇಶಕರಾದ ಮೋಹನ್ ಶೆಟ್ಟಿ ನರ್ವಲ್ದಡ್ಕ,ಸುಧೀಂದ್ರ ಶೆಟ್ಟಿ,ಪ್ರಶಾಂತ್ ಕೋಟ್ಯಾನ್, ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು,ಕಾರ್ಯದರ್ಶಿ ಚಂದ್ರಹಾಸ ನಾಯ್ಕ್ ಎರ್ಮೆನಾಡು ಉಪಸ್ಥಿತರಿದ್ದರು.
ಶ್ರೀಶಾರದ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷ ಡಾ.ರಾಮಕೃಷ್ಣ ಎಸ್ . ಅವರು ಪ್ರಸ್ತಾವಿಸಿ, ಸ್ವಾಗತಿಸಿದರು.ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ವಂದಿಸಿದರು. ರಂಗ ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮೂಡುಪಡುಕೋಡಿ ಹಿ. ಪ್ರಾ. ಶಾಲೆ, ಮೇಲ್ಪತ್ತರ ಮತ್ತು ಕೊಳಲಬಾಕಿಮಾರು ಮಕ್ಕಳಿಂದ ನೃತ್ಯ ವೈಭವ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ವೇ.ಮೂ.ಗೋವಿಂದ ಭಟ್ ಕರಿಮಲೆ ಅವರ ಪೌರೋಹಿತ್ಯದಲ್ಲಿ ಶ್ರೀ ಶಾರದ ಮಾತೆಯ ಪ್ರತಿಷ್ಠಾಪನೆ, ವಿವಿಧ ವೈಧಿಕ ವಿಧಿವಿಧಾನಗಳು ,ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಕಾರ್ಯಕ್ರಮಗಳೊಂದಿಗೆ ನಡೆಯಿತು.ಸಂಜೆ ವಿಸರ್ಜನಾ ಪೂಜೆ, ಪ್ರಸಾದ ವಿತರಣೆಯ ಬಳಿಕ ಶಾರದ ಮಾತೆಯ ಭವ್ಯವಾದ ಶೋಭಾಯಾತ್ರೆ ನಡೆಯಿತು
