ಬಂಟ್ವಾಳ: ತಾಲೂಕಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ ಬೊಳ್ಳಾಯಿ 2024-2025 ನೇ ಸಾಲಿನಲ್ಲಿ299,18,08,796.78 ರೂ. ವ್ಯವಹಾರ ನಡೆಸಿದ್ದು,15,00,000.74 ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ  ಕೆ.ಸಂಜೀವ ಪೂಜಾರಿ ಅವರು ತಿಳಿಸಿದ್ದಾರೆ.


ಸಜೀಪಮುನ್ನೂರು ಗ್ರಾಮದ ಸುಭಾಸ್ ನಗರದಲ್ಲಿರುವ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಚತೆ ವಹಿಸಿ ಮಾತನಾಡಿ ಸದಸ್ಯರಿಗೆ ಶೇ. 25 ಡಿವಿಡೆಂಡನ್ನು ಪ್ರಕಟಿಸಿದರು.
ಸಂಘವು 48,94,76,396.10 ರೂ. ಠೇವಣಿ ಹೊಂದಿದ್ದು, 42,12,58,138 ರೂ. ಸಾಲ ನೀಡಿದೆ.ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪರಿಶ್ರಮದಿಂದ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದ ಅವರು ಸಂಘವು ಖರೀದಿಸಿರುವ 50 ಸೆಂಟ್ಸ್ ಜಾಗದಲ್ಲಿ  ಸಮುದಾಯ ಭವನ, ತರಬೇತಿ ಕೇಂದ್ರವನ್ನೊಳಗೊಂಡಂತೆ ಆಡಳಿತ ಕಚೇರಿಯ ಕಟ್ಟಡವನ್ನು  ಶೀಘ್ರವಾಗಿ ಆರಂಬಿಸಲಾಗುವುದು ಇದಕ್ಕೆ ಸಂಘದ ಸದಸ್ಯರ ಸಹಕಾರವನ್ನು ಅವರು ಯಾಚಿಸಿದರು.  

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯೇ ಗುರಿಯಾಗಿರಬೇಕು:ಹರಿಕೃಷ್ಣ

ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್
ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅಂಕ ಪ್ರಗತಿಯ ಧ್ಯೋತಕವಲ್ಲ, ಸಾಧನೆ ಮಾಡುವವನಿಗೆ ಸುಖ ಸಿಗುವುದಿಲ್ಲ, ಸುಖ ಬಯಸುವವನಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯೇ ಗುರಿಯಾಗಿರಬೇಕು ಎಂದು  ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಬದುಕಿಗೆ ಬೆಳಕು ತೋರಿಸಿದವರು,ಸಮಾಜದ ಅಸ್ಪೃಶ್ಯ ತೆಯನ್ನು  ಹೋಗಲಾಡಿಸಲು ಪ್ರಯತ್ನಿಸಿದರು.ಅವರಿಗೆ ಕೈ ಮುಗಿದರೆ ನಮ್ಮೊಳಗಿನ ಪ್ರತಿಭೆ ಹೊರಬರಲು ಸಾಧ್ಯವಿದೆ ಎಂದು ತಿಳಿಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಂಚಿ ಕೊಳ್ನಾಡಿನ ಸರಕಾರಿ ಪ್ರೌಢ ಶಾಲೆ ಶಿಕ್ಷಕಿ  ವಿಜಯಲಕ್ಷ್ಮಿ ಕಟೀಲು ಮಾತನಾಡಿ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಕಷ್ಟಪಟ್ಟು ಮಕ್ಕಳನ್ನು ಬೆಳೆಸುವ ಪೋಷಕರನ್ನು ಅವರ ಇಳಿವಯಸ್ಸಿನಲ್ಲಿ  ಚೆನ್ನಾಗಿ ನೋಡಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಸಮಾಜದಿಂದ ಬಂದ ಹಣವನ್ನು ವಿದ್ಯಾರ್ಥಿ ವೇತನದ ಮೂಲಕ ಸಮಾಜಕ್ಕೆ ನೀಡುವ  ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಕಾರ್ಯ ಅಭಿನಂದನೀಯವಾಗಿದೆ ಎಂದರು.
ಇದೇ ವೇಳೆ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತಲ್ಲದೆ ಮೂವರು ಹಿರಿಯ ಮೂರ್ತೆದಾರರನ್ನು ಹಾಗೂ ಸಂಘದ ಮಾಜಿ ನಿರ್ದೇಶಕರಾದ ಟಿ ಮುತ್ತಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ದಿವ್ಯಾoಗ ಬಾಲಕಿ ಮಾನ್ಯಳ ಚಿಕಿತ್ಸೆಗೆ ಸಹಾಯಧನ ವಿತರಿಸಲಾಯಿತು.  ಉಪಾಧ್ಯಕ್ಷರಾದ ವಿಠ್ಠಲ ಬೆಲ್ಚಾಡ ಚೇಳೂರು,ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಜಯಶಂಕರ್  ಕಾನ್ಸಾಲೆ, ಕೆ ಸುಜಾತ ಎಂ, ವಾಣಿ ವಸಂತ್, ಅರುಣ್ ಕುಮಾರ್ ಎಂ, ಆಶಿಶ್ ಪೂಜಾರಿ, ಚಿದಾನಂದ ಎಂ ಕಡೇಶ್ವಾಲ್ಯ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಜಿ ಚೇಳೂರು ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಎ.ಜಿ.ಎಂ ಶಿಲ್ಪಾ ಬಿ. ಸ್ವಾಗತಿಸಿದರು. ವೇಣೂರು ಶಾಖಾ ವ್ಯವಸ್ತಾಪಕಿ ವಿಜಯ ಕೆ ವಂದಿಸಿದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *