ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರತಾಪ ಕ್ರೀಡಾ ಸಂಘದ ವತಿಯಿಂದ  ಅಮ್ಟೂರಿನ ಬಾಳಿಕೆ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಾಲೇಜು ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಹಾಕಿ ಆಟಗಾರ ಧ್ಯಾನ್ ಚಂದ್ ಅವರ ಹೆಸರಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಂದಲೇ ಆಯೋಜಿಸಲಾದ ಮೊದಲ ಕೆಸರುಗದ್ದೆ ಇದಾಗಿದೆ ಎಂದರು.

ಮಂತ್ರದೇವತೆ ಸಾನ್ನಿಧ್ಯ ಕಟ್ಟೆಮಾರ್ ಇದರ ಧರ್ಮದರ್ಶಿ  ಮನೋಜ್ ಕಟ್ಟೆಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯೆ  ಲಕ್ಷ್ಮೀ ರಘುರಾಜ್ ಇವರು  ಪ್ರತಾಪ ಕ್ರೀಡಾಸಂಘದ ಲೋಗೋ ಬಿಡುಗಡೆ ಮಾಡಿದರು. ರಾಷ್ಟ್ರಸೇವಿಕಾ ಸಮಿತಿಯ ಹಿರಿಯ ಮಾರ್ಗದರ್ಶಕರಾದ ಡಾ. ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು. 

ಭಾಜಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ರೈತ ಮೋರ್ಚಾ ಬಂಟ್ವಾಳ ತಾಲೂಕು ಇದರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಯುವಮೋರ್ಚಾ ಬಂಟ್ವಾಳ ತಾಲೂಕು ಇದರ ಕಾರ್ಯದರ್ಶಿ ಕೌಶಿಲ್ ಶೆಟ್ಟಿ ಬಾಳಿಕೆ, ಜಯಂತ್ ರೈ ಬಾಳಿಕೆ, ಉದ್ಯಮಿ ಅಜಯ್ ಪಡೀಲ್, ಪುಷ್ಪರಾಜ್ ಕಲ್ಲಡ್ಕ, ಜಯಂತ್ ರೈ, ಉದ್ಯಮಿ  ಮಧುಕೃಷ್ಣ ಸೋಮಯಾಜಿ, ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ್ ಶ್ರೀಮಾನ್, ಕುಶಾಲಪ್ಪ ಅಮ್ಟೂರು ವೇದಿಕೆಯಲ್ಲಿದ್ದರು. ಉಪಪ್ರಾಂಶುಪಾಲ ಯತಿರಾಜ್ ಪೆರಾಜೆ ಪ್ರಸ್ತಾವಿಸಿ, ಸ್ವಾಗತಿಸಿದರು. 

ವಿದ್ಯಾರ್ಥಿಗಳಾದ ಕು. ಅಶ್ವಿನಿ ವಂದಿಸಿದರು, ಬಿಸಿಎ  ಜಯಸೂರ್ಯ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವಿಧ ಮನೋರಂಜನಾತ್ಮಕ ಕ್ರೀಡೆಗಳು ನಡೆಯಿತು.

By Suddi9

Leave a Reply

Your email address will not be published. Required fields are marked *