ಬಂಟ್ವಾಳ :ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣ ಹಾಗೂ ಸಂಘಟನೆಗಳಿಗೆ ಪ್ರಧಾನ್ಯತೆ ನೀಡಿ ಮನುಕುಲವನ್ನು ಉದ್ದಾರ ಮಾಡಿದ ಮಹಾನ್ ಮಾನವತಾವಾದಿ, ಅವರ ಸಂದೇಶ ಸರ್ವಾಕಾಲಿಕವಾಗಿದ್ದು, ಸುಸಂಸ್ಕೃತ ಸಮಾಜಕ್ಕಾಗಿ ಸಂಘಟನೆಯನ್ನು ಬಲಪಡಿಸಬೇಕು ಎಂದು ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಶ್ರೀ ಗುರುಸದನ ಕುಮ್ಡೇಲ್, ಪುದು ಇದರ ಅಶ್ರಯದಲ್ಲಿ ಪುದು- ಕುಮ್ಡೇಲಿನ ಶ್ರೀ ಗುರುಸದನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ದೇಶ ಅಸ್ತಿಯಾಗಬೇಕಲ್ಲದೆ ಜೀವನದಲ್ಲಿ ಸಂಸ್ಕಾರವನ್ನುಅಳವಡಿಸಿಕೊಳ್ಳಬೇಕು ವಿದ್ಯಾವಂತರಾದ ಬಳಿಕ ತಮ್ಮ ಹೆತ್ತವರನ್ನು ಎಂದೂ ಮರೆಯಬಾರದು ಎಂದರು.
ಮಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ಸುದರ್ಶನ್ ಡಿ ಸುವರ್ಣ ಮಾತನಾಡಿ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತಿರುವ ಗುರು ವೇದಿಕೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕುಮ್ಡೇಲ್ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ನವೀನ್ ಪೂಜಾರಿ ಮಾರಿಪಳ್ಳ,ಗೌರವಧ್ಯಕ್ಷ ನಾಗಪ್ಪ ಪೂಜಾರಿ ಕಬೇಲ, ಮಹಿಳಾ ವೇದಿಕೆಯ ಅಧ್ಯಕ್ಷೆ ಭಾಗ್ಯವತಿ ನಾಗೇಶ್ ಕೋಟ್ಯಾನ್, ಗೌರವಧ್ಯಕ್ಷೆ ವೇದಾವತಿ ಶೇಖರ್ ಪೂಜಾರಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು. ಗುರು ಸದನದ ಮೇಲ್ವಿಚಾರಕ ಲೋಕೇಶ್ ಕುಮ್ಡೇಲ್ ಸವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಪುದು ನಾರಾಯಣ ಗುರು ವೇದಿಕೆಯ ಉಪಾಧ್ಯಕ್ಷ ಸಚಿನ್ ಪೂಜಾರಿ ಕೊಡ್ಮಾಣ್ ಸ್ವಾಗತಿಸಿ,ಸದಸ್ಯ ಬ್ರಿಜೇಶ್ ಅಂಚನ್ ಪ್ರಸ್ತಾವನೆಗೈದರು.ಜತೆ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಕುಮ್ಡೇಲ್ ವಂದಿಸಿದರು. ಕಿಶೋರ್ ಕುಮಾರ್ ಸುಜೀರ್ ಕಾರ್ಯಕ್ರಮ ನಿರೂಪಿಸಿದರು, ಜಗದೀಶ್ ಪೂಜಾರಿ ಕುಮ್ಡೇಲ್, ಅಶೋಕ್ ಹೊಯ್ಗೆಗದ್ದೆ ಸಹಕರಿಸಿದರು.
ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು ಮಧ್ಯಾಹ್ನ ಗುರು ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ಜರುಗಿತು.
