ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು‌ ಇದರ ಮಹಿಳಾ ಘಟಕದ  ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ  ಸುಜಾತ ಪಿ.ರೈ ಕಲ್ಲಡ್ಕ ಅವರು ಗೆಲುವು ಸಾಧಿಸಿದ್ದಾರೆ.ಬಂಟ್ವಾಳ ಮಹಿಳಾ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸುಜಾತ ಪಿ.ರೈ ಹಾಗೂ ಸಂಧ್ಯಾರೈ ಬೆಳ್ಳೂರು ಅವರ ನಡುವೆ ಪ್ರಬಲ ಪೈಪೋಟಿ ನಡೆದಿದ್ದು,ಕೊನೆಗೆ ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.

ಸುಜಾತ ಪಿ.ರೈ ಅವರು ಅಭೂತಪೂರ್ವ ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ‌ ಆಯ್ಕೆಯಾಗಿದ್ದಾರೆ.ಈ ಹಿಂದೆ‌ ಇವರು‌ ಸಮಿತಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಉಳಿದಂತೆ ಉಪಾಧ್ಯಕ್ಷ ರಾಗಿ ಜ್ಯೋತಿ ರೈ ಮಾಣಿ,ಕಾರ್ಯದರ್ಶಿಯಾಗಿ ಮಂದಾರತಿ ಶೆಟ್ಟಿ ಸಿದ್ದಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ರೂಪ‌ ಅರಳ ,ಜತೆ ಕೋಶಾಧಿಕಾರಿಯಾಗಿ ಶೋಭಾ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *