ಅಡ್ಡೂರು: ಸಮಾಜದಲ್ಲಿ ಭಾವೈಕ್ಯತೆ, ಸಾಮಾಜಿಕ ಸಾಮರಸ್ಯ ನೆಲೆ ನಿಲ್ಲಲಿ ಈ ನಿಟ್ಟಿನಲ್ಲಿ ಯುವ ಸಮೂಹ ಕಾರ್ಯಪ್ರವೃತ್ತರಾಗಬೇಕು, ಜಾತಿ-ಧರ್ಮ, ವರ್ಗ ಬೇಧ ಮರೆತು ಒಟ್ಟುಗೂಡಿಸಲು ಕಂಡುಕೊಂಡ ಮಾರ್ಗವೇ ಸಾರ್ವಜನಿಕ ಗಣೇಶೋತ್ಸವ ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಹೇಳಿದರು.

ಅವರು ಅಡ್ಡೂರು ೩೯ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಬೆನಕಮಂಟಪದಲ್ಲಿ ಬುಧವಾರ ನಡೆದ ೩೯ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಅಧ್ಯಕ್ಷತೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ ಹಿರಿಯ ಪ್ರಬಂಧಕವಿಶ್ವೇಶ್ವರ ಭಟ್ ಕಾಂಜಿಲಕೋಡಿ ವಹಿಸಿದ್ದರು. ಮಣಿಪಾಲ ವಿದ್ಯಾ ಸಂಸ್ಥೆಯ ಉಪನ್ಯಾಸಕರು ಶ್ರೀಮತಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಬಜಪೆ ಪೊಲೀಸ್ ನಿರೀಕ್ಷಕರು ಶ್ರೀ ಸಂದೀಪ್ ಜಿ.ಎಸ್ ಮಾತನಾಡಿದರು.

ಗುರುಪುರ ವ್ಯ.ಸೇ.ಸ.ಸಂಘ ಜಿ.ಎಂ. ಉದಯ ಭಟ್ ಗುರುಪುರ, ಪೊಳಲಿ ಕೃಷಿಪತ್ತಿನ ಸೇವಾ ಸಹಕಾರಿ ಸಂಘ (ನಿ) ಪೊಳಲಿ ವಿಜಯ ರವಿ ಫೆರ್ನಾಂಡಿಸ್ ಸಿಇಓ , ಬಾಬಾ ಪಕ್ರುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಪೊಳಲಿ,ಶುಭ ಹಾರೈಸಿದರು.

ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ ಕಾರ್ಯದರ್ಶಿ ರಾಜೇಶ್ ಪಡ್ಪು, ಗಣೇಶ್ ಟೈಲರ್, ರಾಜೇಶ್ ರಾವ್, ಶ್ರೀ ಸಾರ್ವಜನಿಕ ಸೇವಾ ಸಮಿತಿ ಅಧ್ಯಕ್ಷ ಯಶೋಧರ ಅಡ್ಡೂರು, ನೂಯಿ ಬಾಲಕೃಷ್ಣ ರಾವ್‌, ಧನಂಜಯ ಭಟ್‌ ಗಂದಾಡಿ,ಲೋಕನಾಥ್‌ ಪೊನ್ನೆಲ ವೇದಿಕೆಯಲ್ಲಿದ್ದರು.

ನವೀನ್ ಆಚಾರ್ ಸ್ವಾಗತಿಸಿ ಜಿತೇಶ್ ಕುಮಾರ್ ಉಳಿಯ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಗಣೇಶನ ವಿಗ್ರಹವನ್ನು ಕೊಂಬು,ಕಹಳೆ, ಮಂಗಳವಾದ್ಯ,ಶಂಖ,ಜಾಗಂಟೆ ನಿನಾದಗಳೊಂದಿಗೆ ಕುಣಿತ ಭಜನೆ, ವಿವಿಧ ಛದ್ಮವೇಷಗಳಿಂದ ವೈಭವಪೂರಿತ ಮೆರವಣಿಗೆಯಲ್ಲಿ ಅಡ್ಡೂರು ನೂಯಿ ಮಾರ್ಗವಾಗಿ ಸಾಗಿಬಂದು ಬಡಕಬೈಲ್ ತನಕ ಮೆರವಣಿಗೆಯಲ್ಲಿ ಸಾಗಿ ಅಲ್ಲಿಂದ ಹಿಂದಿರುಗಿ ಪವಿತ್ರ ಪಲ್ಗುಣಿ ನದಿಯಲ್ಲಿ ವಿಸರ್ಜಿಸಲಾಯಿತು.

ಶ್ರೀ ಸಾರ್ವಜನಿಕ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ಭಕ್ತಾಧಿಗಳು ಶೋಬಾಯಾತ್ರೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *