ಕೈಕಂಬ :ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಆ. 27ರಂದು ಬುಧವಾರ ಶ್ರೀ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು. ರಾಮಕೃಷ್ಣ ತಪೋವನದ ಬಾಲಕಾಶ್ರಮದ ಹಳೆಯ ವಿದ್ಯಾರ್ಥಿ ಧಾರವಾಡದ ನಿವಾಸಿ ಮೌಲಾನ ಹಲವು ವರ್ಷಗಳಿಂದ ಪ್ರಾರ್ಥನಾ ಮಂದಿರದಲ್ಲಿ ಸುಂದರವಾದ ಮಣ್ಣಿನ ಗಣೇಶನ ವಿಗ್ರಹವನ್ನು ರಚಿಸುತ್ತಿದ್ದು ಈ ವರ್ಷವು ಧಾರವಾಡದಿಂದ ಬಂದು ವಿಗ್ರಹ ಸಿದ್ದಪಡಿಸಿದ್ದಾರೆ ಇವರೊಂದಿಗೆ ಇನ್ನೊಬ್ಬ ಹಳೆವಿದ್ಯಾರ್ಥಿ ಮಂಜುನಾಥ ಕೈಜೋಡಿಸಿದ್ದಾರೆ.

ಗಣೇಶನಿಗೆ ಹೂಹಾರ ಹಾಕಿ ಇಷ್ಠವಾದ ಕಬ್ಬು .ಕೊಡುಬಲೆ, ಚಕ್ಕುಲಿ,ಎಳ್ಳುಂಡೆ ಹಲವಿ ಬಗೆಯ ನೈವೇದ್ಯ ಅರ್ಪಿಸಿ ಬಾಲಕಾಶ್ರಮದ ವಿದ್ಯಾರ್ಥಿಗಳು ಸೇರಿ ಭಜನೆಗಳನ್ನು ಹಾಡಿದರು.

ಆರತಿ ಮಾಡಿ ಪೂಜಿಸಲಾಯಿತು. ನಂತರ ಆಶ್ರಮದ ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಆಶ್ರಮವಾಸಿಗಳು ಸೇರಿ ಆವರಣದೊಳಗೆ ಗಣೇಶನ ಮೂರ್ತಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಆಶ್ರಮದ ತೆರೆದ ಬಾವಿಯಲ್ಲಿ ವಿಸರ್ಜಿಸಲಾಯಿತು.


ಶ್ರೀ ವಿಘ್ನ ನಿವಾರಕನಾದ ಗಣೇಶ ನಮಗೆ ಭಕ್ತಿ, ವೈರಾಗ್ಯ ಮತ್ತು ಜ್ಞಾನವನ್ನು ನೀಡಲಿ. ಅಸೂಯೆ, ದ್ವೇಷ ಮತ್ತು ಇತರ ಸಾಮಾಜಿಕ ದುಷ್ಕೃತ್ಯಗಳಿಂದ ಮುಕ್ತವಾದ ಪ್ರೀತಿ ಮತ್ತು ಸಾರ್ವತ್ರಿಕ ಸಹೋದರತ್ವ ಮೇಲುಗೈ ಸಾಧಿಸಲಿ. ಎಂದು ರಾಮಕೃಷ್ಣತಪೋವನದ ಸ್ವಾಮೀ ವಿವೇಕ ಚೈತನ್ಯಾನಂದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

