ಬಂಟ್ವಾಳ: ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ದೈವಿ ಶಕ್ತಿಯ ಅನಾವರಣ ಅದನ್ನು ಹೊರತೆಗೆಯುವ ಕೆಲಸ ಪೋಷಕರು ಶಿಕ್ಷಕರು ವಿದ್ಯಾಭಿಮಾನಿಗಳಿಂದಾಗಬೇಕು ಎಂದು ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಶುಕ್ರವಾರ ಬಂಟ್ವಾಳ ತಾಲೂಕಿನ ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಆರ್. ಪಿ.ಎಲ್ ಸಂಸ್ಥೆಯ ಸಿ.ಎಸ್ .ಆರ್ ಅನುದಾನದಿಂದ ಮತ್ತು ಶಾಲಾಭಿವೃದ್ಧಿ ಸಮಿತಿ, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಇತರ ಸಂಘ ಸಂಸ್ಥೆ, ದಾನಿಗಳ ಅನುದಾನದ ನೆರವಿನಿಂದ ನೂತನವಾಗಿ ನಿರ್ಮಾಣಗೊಂಡ ತರಗತಿ ಕೊಠಡಿಗಳ ಉದ್ಘಾಟನೆಗೈದು ಅವರು ಮಾತನಾಡಿದರು.

ನಿರ್ಮಾಣಗೊಂಡ ಮೂರು ತರಗತಿ ಕೊಠಡಿಗಳ ಪೈಕಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎಂ ಆರ್ ಪಿ ಎಲ್ ನ ಪ್ರದೀಪ್ ಕುಮಾರ್ , ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ ಜಿ ತಲಾ ಒಂದು ಕೊಠಡಿಯನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.

ಅತಿಥಿಯಾಗಿದ್ದ ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮ ಫಲಕಗಳ ಅನಾವರಣಗೈದು ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಮೂರ್ನಾಲ್ಕು ಗ್ರಾಮ ಒಟ್ಟು ಸೇರಿಸಿ ಒಂದು ಮಾದರಿ ಶಾಲೆ ನಿರ್ಮಾಣವಾಗುವ ಅಗತ್ಯತೆ ಇದ್ದು ಈ ಮೂಲಕ ಉತ್ತಮ ಶಿಕ್ಷಣ ನೀಡಲು ಸಾಧ್ಯ ಈ ಕುರಿತು ರಾಜ್ಯ ಶಿಕ್ಷಣ ಸಚಿವರಿಗೂ ಮನವರಿಕೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ವಹಿಸಿದ್ದರು.ಈ ಸಂದರ್ಭದಲ್ಲಿ 1979ರಲ್ಲಿ ಬೊಂಡಾಲ ಸರಕಾರಿ ಶಾಲೆ ಸ್ಥಾಪನೆಗೆ ಶ್ರಮಿಸಿದ ಮಹನೀಯರನ್ನು ಗೌರವಿಸಲಾಯಿತು.ಕಟ್ಟಡ ಗುತ್ತಿಗೆದಾರ ಗೋಪಾಲ್ ನೆಲ್ಲಿ ಹಾಗೂ ಎಂ ಆರ್ ಪಿ ಎಲ್ ನ ಪ್ರದೀಪ್ ರವರನ್ನು ಗೌರವಿಸಲಾಯಿತು.
ಇದಕ್ಕೆ ವಿಶೇಷವಾಗಿ ಸಹಕರಿಸಿದ ಪದ್ಮನಾಭ ಕೊಟ್ಟಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜನಾರ್ದನ ಕುಲಾಲ್, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಂಡಾಲ ವಿನೋದ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್ ಹಾಗೂ ಶಿಕ್ಷಕಿಯರನ್ನು, ಅಡುಗೆ ಸಿಬ್ಬಂದಿಗಳನ್ನು, ನೃತ್ಯ ಶಿಕ್ಷಕ ಶ್ರೀಕಾಂತ್ ಕೊಂಡಣ, ಶಾಲೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಿ ಸನ್ಮಾನಿಸಲಾಯಿತು.
ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿ ವಿದ್ಯಾಕುಮಾರಿ, ಬಂಟ್ವಾಳ ನಗರ ಕ್ಲಸ್ಟರ್ ಸಿ ಆರ್ ಪಿ ಸುಧಾಕರ್, ಪುರಸಭಾ ಸದಸ್ಯ ಜಯರಾಮ ಗುಂಡೂರ್,ಸತೀಶ್ ಶೆಟ್ಟಿ ಬೊಂಡಾಲ, ಶಾಲಾ ನಾಯಕ ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು,ಶಾಲಾ ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ವಿದ್ಯಾಭಿಮಾನಿಗಳು, ಸಂಘ ಸಂಸ್ಥೆಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಮೊದಲು ಶಾಲಾ ಮಕ್ಕಳಿಂದ ತುಳುನಾಡ ವೈಭವ ನೃತ್ಯ ರೂಪಕ ಪ್ರದರ್ಶಿಸಲ್ಪಟ್ಟಿತು.
ಶಾಲಾ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್ ಸ್ವಾಗತಿಸಿ, ಶಿಕ್ಷಕಿ ಭವ್ಯ ವಂದಿಸಿದರು. ಶಿಕ್ಷಕಿ ಲಾವಣ್ಯ ಹಾಗೂ ಸೌಮ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿರಾದ ಕಿಶೋರಿ ಹಾಗೂ ಭವ್ಯಮಾತಾಜಿ ಸಹಕರಿಸಿದರು
