ಬಂಟ್ವಾಳ : ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ಟಿಲ್ಲರ್ ಉಳುಮೆ ಯಂತ್ರವನ್ನು ತಾಲೂಕಿನ ಕಾವಳಮೂಡೂರು ಗ್ರಾಮದ ಪುಂಡಿಕ್ಕು ನಿವಾಸಿ ರೈತ ಗಣೇಶ್ ದೇವಾಡಿಗ ಅ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಶುಕ್ರವಾರ ವಿತರಿಸಿದರು.

14 ಹೆಚ್‌ಪಿ ಟಿಲ್ಲರ್ ಗೆ 2,11,500 ರೂ.ವಾಗಿದ್ದು 82500/- ರೂ. ಸಹಾಯಧನವನ್ನು ಫಲಾನುಭವಿ ರೈತರಿಗೆ ಕೃಷಿ ಇಲಾಖೆಯಿಂದ ಸೌಲಭ್ಯದ ಮೂಲಕ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್. ಕೃಷಿ ಅಧಿಕಾರಿ ನಂದನ್ ಶೆಣೈ, ಪಿ. ಕಛೇರಿ ಅಧೀಕ್ಷಕರಾದ ಮೀನಾಕ್ಷಿ, ಆತ್ಮ ಯೋಜನೆ ಬಿಟಿಎಂ ದೀಕ್ಷಾ, ಎಟಿಎಂ ಹನುಮಂತ್ ಕಾಳಗಿ, ರೈತ ಸಂಪರ್ಕ ಕೇಂದ್ರದ ಅಕೌಂಟೆಂಟ್ ದೀಪ್ತಿ, ಲಾವಣ್ಯ, ಕಛೇರಿ ಸಿಬ್ಬಂದಿ ಸಂದೀಪ್, ಯಶೋಧಾ, ದಿವ್ಯ, ತ್ರೀನೇತ್ರ ಮೊದಲಾದವರು ಉಪಸ್ಥಿತರಿದ್ದರು.
