ಕೈಕಂಬ: ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 40ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಲಿಲ್ಲಿ ಡಿ’ಸೋಜ (69) ಅಲ್ಪ ಕಾಲದ ಅಸೌಖ್ಯದಿಂದ ಆ.20 ರಂದು ಬುಧವಾರ ನಿಧನ ಹೊಂದಿದರು. ಮೃತರು ಇಬ್ಬರು ಮಕ್ಕಳನ್ನು ಹಾಗೂ ಅಪಾರ ಶಿಷ್ಯವೃಂದ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಬೆಂಜನಪದವು ದಿ.ಜೋಸೆಫ್ ಪಿರೇರಾ ಅವರ ಪತ್ನಿಯಾಗಿದ್ದ ಇವರು ನಿವೃತಿ ಹೊಂದಿದ ಮೇಲೆ ಕಳೆದ 8 ವಷಗಳಿಂದ ಇಬ್ಬರು ಮಕ್ಕಳು ಮೂವರು ಮೊಮ್ಮಕ್ಕಳು ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ಇತ್ತಿಚೇಗೆ ಅನಾರೋಗ್ಯದಿಂದ ಇದ್ದು ನಗರದ ಖಾಸಾಗಿ ಆಸ್ಪತ್ರಯಲ್ಲಿ ಆ.19ರಂದು ನಿಧನರಾಗಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿದ್ದ ಇವರು ಊರಿನ ಜನರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದರು. ಇವರ ನಿಧನ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ತುಂಬಾ ನೋವನ್ನು ತಂದಿದೆ.
ಅವರ ನಿಧನಕ್ಕೆ ಶಾಲಾ ಸಂಚಾಲಕರಾದ ನರೇಂದ್ರನಾಥ ಭಂಡಾರಿ, ಮತ್ತು ರಮೇಶ್ಚಂದ್ರ ಭಂಡಾರಿ ಪರಕೂರು ಹಾಗೂ ಸಹೋದ್ಯೋಗಿಗಳಾದ ನಿವೃತ ಮುಖ್ಯ ಶಿಕ್ಷಕ ವಿಷ್ಣುಮೂರ್ತಿ ಭಟ್, ಗಂಗಾಧರ ರೈ ಕಮ್ಮಾಜೆ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಮುಖ್ಯ ಶಿಕ್ಷಕ ಕೇಶವ ನಾಯ್ಕ್ ಹಾಗೂ ಸಹೋದ್ಯೋಗಿ ಶಿಕ್ಷಕಿಯರಾದ ಶ್ರೀಮತಿ ಕಮಾಲಾಕ್ಷೀ, ಎವ್ಜನ್ ಕುವೆಲ್ಲೋ, ಶ್ರೀಮತಿ ಮೋಹಿನಿ., ಶಿಕ್ಷಕ ವೃಂದದವರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಶಿಷ್ಯವೃಂದದವರು ಸಂತಾಪ ಸೂಚಿಸಿದ್ದಾರೆ.
ಅಂತಿಮ ದರ್ಶನ ಆ.21ರಂದು ಗುರುವಾರ 2ಗಂಟೆಗೆ ಸರಿಯಾಗಿ ಬೆಂಜನಪದವಿನಲ್ಲಿ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ಗಂಟೆಗೆ ಸರಿಯಾಗಿ ಬೆಳ್ಳೂರು ಸಂತ ಮೈಕಲರ ಚರ್ಚ್ ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. .
