ಬಂಟ್ಚಾಳ: ಕ್ರೀಡೆಗಳು ಕೇವಲ ಆಟವಲ್ಲ ,ಇದು ಒಗ್ಗಟ್ಟಿನಿಂದ ಆಡುವ ಒಂದು ಆರೋಗ್ಯಕರ ಸ್ಪರ್ಧೆಯಾಗಿದ್ದು, ಈ ಸ್ಪರ್ಧೆಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ  ಸೌಹಾರ್ದತೆಯನ್ನು ಬೆಳೆಸಲು  ಸಹಕಾರಿಯಾಗಿದೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸಂತೋಷ್ ಕುಮಾರ್ ಹೇಳಿದರು.


   ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಶಂಭೂರು ಇವುಗಳ  ಆಶ್ರಯದಲ್ಲಿ  ಶಂಭೂರು ಶಾಲೆಯಲ್ಲಿ ಜರಗಿದ ಕಲ್ಲಡ್ಕ ವಲಯ ಮಟ್ಟದ  ಪ್ರಾಥಮಿಕ ವಿಭಾಗದ  ಬಾಲಕರ ಹಾಗೂ ಬಾಲಕಿಯರ ವಾಲಿ ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ , ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ  ವಿಮಲ,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶಾಂತಿಲ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ  ಇಂದುಶೇಖರ,ಕ್ರೀಡಾ ಕೂಟದ ನೋಡಲ್ ದೈಹಿಕ ಶಿಕ್ಷಕ ಜಗದೀಶ್ ಬಾಳ್ತಿಲ, ಗೋಳ್ತಮಜಲು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ  ಪ್ರಕಾಶ್,ನಿವೃತ್ತ ದೈಹಿಕ ಶಿಕ್ಷಣ  ಶಿಕ್ಷಕ ಶಂಕರ್ ಕಲ್ಲಡ್ಕ, ಹಳ್ಳಿಮನೆ ಫುಡ್ ಪ್ರೋಡಕ್ಟನ ಮಾಲಕರಾದ ಯೋಗಿತಾ ಹೇಮಚಂದ್ರ, ಬೊಂಡಾಲ ಜಗನ್ನಾಥ ಸ್ಮಾರಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ  ಕಮಲಾಕ್ಷ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ಆಶಾ ನಾಯಕ್,ಸಿ.ಆರ್.ಪಿ.ಗಳಾದ ಪ್ರೇಮಲತಾ ಹಾಗೂ ಸುಧಾಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿದರು.ಶಿಕ್ಷಕಿ ಚಿತ್ರಾ ವಂದಿಸಿದರು. ಶಿಕ್ಷಕಿ ಜಯಂತಿ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಕೆ ನಿರ್ವಹಿಸಿದರು.

ನಂತರ ನಡೆದ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು..ಸ.ಉ.ಹಿ.ಪ್ರಾ ಶಾಲೆ ಮಾಣಿ,
ದ್ವಿತೀಯ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಶಂಭೂರು ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಅನಂತಾಡಿದ್ವಿತೀಯ ಸ್ಥಾನವನ್ನು  ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಮಾಣಿ ಪಡೆದು ಕೊಂಡು ಮುಂದಿನ ತಾಲೂಕು ಹಂತದ ಪಂದ್ಯಕ್ಕೆ ಆಯ್ಕೆ ಆಯಿತು. 

By suddi9

Leave a Reply

Your email address will not be published. Required fields are marked *