ಬಂಟ್ವಾಳ :ಎಳೆಯರ ಬಳಗ (ರಿ ) ರಾಮಲ್ ಕಟ್ಟೆ ಮತ್ತು ಎಳೆಯರ ಬಳಗ ಮಹಿಳಾ ಮಂಡಳಿ ಇದರ 2025–26ನೇ ಸಾಲಿನ ವಾರ್ಷಿಕ ಸಭೆಯು ಪೂಜೇಶ್ ರಾಮಲ್ ಕಟ್ಟೆ ಇವರ ಅಧ್ಯಕ್ಷತೆಯಲ್ಲಿ  ನಡೆಯಿತು.


ಸಭೆಯಲ್ಲಿ 2025–26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.ಅಧ್ಯಕ್ಷರಾಗಿ ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ ಅವರು ಸರ್ವಾನುಮತದಿಂದ ಪುನರಾಯ್ಕೆಗೊಂಡರು.

ವಸಂತ ಅಮೀನ್( ಪ್ರಧಾನ ಕಾರ್ಯದರ್ಶಿ),ಅನಿಲ್ ರಾಮಲ್ ಕಟ್ಟೆ (ಕೋಶಾಧಿಕಾರಿ),ಆರ್. ಎಸ್. ಜಯ
(ಗೌರವಾಧ್ಯಕ್ಷರು),ನವೀನ್ ರಾಮಲ್ ಕಟ್ಟೆ, ಜಗನ್ನಾಥ್ ಸಾಲಿಯಾನ್( ಉಪಾಧ್ಯಕ್ಷರು)
ಪದ್ಮನಾಭ ಬೆಳ್ಚಡ(ಗೌರವ ಸಲಹೆಗಾರರು)   ರತೀಶ್ ರಾಮಲ್ ಕಟ್ಟೆ(ಕ್ರೀಡಾಧ್ಯಕ್ಷರು),ಗಣೇಶ್, ವಿನೀತ್(ಕ್ರೀಡಾ ಕಾರ್ಯದರ್ಶಿಗಳು),ದೋಮ ವಳವೂರ್,ಸಾಂಸ್ಕೃತಿಕ ಕಾರ್ಯದರ್ಶಿ (ಸಲಹೆಗಾರರು) ಹಾಗೂ ನೊಣಯ್ಯ ಕುಲಾಲ್ ದೇಮುಂಡೆ, ಅಶೋಕ್ ಕಲ್ಲಗುಡ್ಡೆ, ರಾಘವ ದೂಟ, ಮೋಹನ್ ದಾಸ್ ಮಣೂರು, ಸತೀಶ್ ರಾಮಲ್ ಕಟ್ಟೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.


ಅದೇ ರೀತಿಭಜನಾ ಸಮಿತಿಯ ಸಂಚಾಲಕರಾಗಿ ಸಂತೋಷ್ ರಾಮಲ್ ಕಟ್ಟೆ, ಸಹ ಸಂಚಾಲಕರಾಗಿ ಶೇಖರ್ ಭಂಡಾರಿ, ಪ್ರಸಾದ್ ರಾಮಲ್ ಕಟ್ಟೆ, ಕಾರ್ಯದರ್ಶಿಯಾಗಿ ವಸಂತಿ ಅರಬನ, ಸಹ ಕಾರ್ಯದರ್ಶಿ ಸಂಧ್ಯಾ ಸುಶೀಲ್, ಸೌಮ್ಯ ರಾಮಲ್ ಕಟ್ಟೆ, ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅನಿಲ್ ರಾಮಲ್ ಕಟ್ಟೆ ಸ್ವಾಗತಿಸಿ, ನವೀನ್ ರಾಮಲ್ ಕಟ್ಟೆ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

By suddi9

Leave a Reply

Your email address will not be published. Required fields are marked *