ಉಳ್ಳಾಲ: ಮುನ್ನೂರು ಗ್ರಾಮದ ಸೋಮನಾಥ ಉಳಿಯದಲ್ಲಿರುವ ಶ್ರೀ ಸೋಮೇಶ್ವರೀ ದೇವಸ್ಥಾನ ಮತ್ತು ಶ್ರೀಅರಸು ,ಧೂಮಾವತಿ ಬಂಟ ದೈವಸ್ಥಾನ(ರಿ) ದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ಕ್ಷೇತ್ರದ ವಠಾರದಲ್ಲಿ‌ ನಡೆಯಿತು.


ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಕೇತ್ರದಲ್ಲಿ ಬ್ರಹ್ಮಕಲಶೋತ್ಸವವನ್ನು ನಡೆಸಲು ಸಂಕಲ್ಪಿಸಲಾಗಿದ್ದು,ಈ ನಿಟ್ಟಿನಲ್ಲಿ ಶೀಘ್ರವೇ ಸಮಾಜ ಬಾಂಧವರ ಸಮಾಲೋಚನಾ ಸಭೆ ಆಯೋಜಿಸಿ ಬ್ರಹ್ಮಕಲಶ ಸಮಿತಿಯನ್ನು ರಚಿಸಲಾಗುವುದು ಈ ಪುಣ್ಯಕಾರ್ಯರು ಸರ್ವರು ಕೈಜೋಡಿಸಬೇಕು ಎಂದು ಕೋರಿದರು.


ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ,ಆಡಳಿತ ಮಂಡಳಿಯ ಗವಗರವಾಧ್ಯಕ್ಷರು,ಉಳ್ಳಾಲ ಮಾಗಣೆಯ ಗುರಿಕಾರರಾದ ಯು.ದಯಾನಂದ ನಾಯಕ್,ಮುಂಬೈ ಸಜ್ಜನ್ ಸೇವಾ ಸಂಘದ ಪ್ರತಿನಿಧಿ ಜೈರಾಜ್ ನಾಯಕ್ ಮುಂಬೈ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು


ಶ್ರೀ ಸೋಮೇಶ್ವರೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಶೀಲ ಯು.ನಾಯಕ್,ಶ್ರೀ ಅರಸು, ಧೂಮಾವತಿ ಬಂಟ ದೈವಸ್ಥಾನದ ಸಹಾಯಕ ಅರ್ಚಕರಾದ ವಿನೋದ್ ನಾಯಕ್ ಸೋಮನಾಥ ಉಳಿಯ,ದೇವಳದ ಅರ್ಚಕರಾದ ದಿನಕರ್ ಭಟ್,ಆಡಳಿತ ಮಂಡಳಿ ಉಪಾಧ್ಯಕ್ಷ ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ,ಕಾರ್ಯದರ್ಶಿಗಳಾದ ಯೋಗೀಶ್ ನಾಯಕ್ ಪಂಪ್ ವೆಲ್,ಆಶಾ ನಾಯಕ್ ಗೋರಿಗುಡ್ಡೆ,ಜತೆ ಕೋಶಾಧಿಕಾರಿ ಅನುಷ್ ನಾಯಕ್ ಮಜಲ್ ತೋಟ  ಅವರು ಉಪಸ್ಥಿತರಿದ್ದರು.


ಕೋಶಾಧಿಕಾರಿ ಸುದೇಶ್ ಕುಮಾರ್ ನಾಯಕ್ ಲೆಕ್ಕಪತ್ರ ಮಂಡಿಸಿದರು.ಪ್ರ.ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಅವರು ಸ್ವಾಗತಿಸಿ,ವರದಿ ವಾಚಿಸಿ, ಕೊನೆಯಲ್ಲಿ ವಂದಿಸಿದರು.

By suddi9

Leave a Reply

Your email address will not be published. Required fields are marked *