ಬಂಟ್ವಾಳ ಜೈನ್ ಮಿಲನ್ ನಿಂದ ಖಂಡನಾ ನಿರ್ಣಯ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಪೋಲಕಲ್ಪಿತವಾಗಿ ನಡೆಸಲಾಗುತ್ತಿರುವ ಅಪಪ್ರಚಾರದ ಬಗ್ಗೆ ಜೈನ್ ಮಿಲನ್ ಬಂಟ್ವಾಳ ಘಟಕ ತುರ್ತು ಸಭೆ ನಡೆಸಿಖಂಡನಾ ನಿರ್ಣಯಕೈಗೊಂಡಿದೆ.

ಭಾನುವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ಜಯುನ್ ಮಿಲನ್ ಅಧ್ಯಕ್ಷ ರಾಜೇಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ತುರ್ತು ಸಭೆಯಲ್ಲಿ ಕೆಲವೊಂದು ಪಟ್ಟ ಬದ್ದ ಹಿತಾ ಶಕ್ತಿಗಳು ಜೈನ ಸಮಾಜ ಮತ್ತು ಜೈನ ಮುನಿಗಳ ಮೇಲೆ ವಿನಾಕಾರಣ ಸಾಕ್ಷ್ಯಧಾರಗಳಿಲ್ಲದೆ ಆರೋಪ ಮಾಡುವುದಲ್ಲದೆ ಜನ ಸಮೂಹವನ್ನು ಕ್ಷೇತ್ರದ ವಿರುದ್ದ ಎತ್ತಿ ಕಟ್ಟುವ ಮೂಲಕ ಜನ ಸಾಮಾನ್ಯರಲ್ಲಿ ಭಯ ಆತಂಕ ಉಂಟು ಮಾಡುತ್ತಿರುವುದನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.
ಈ ಸಭೆಯ ವೀಕ್ಷಕರಾಗಿ ಅಗಮಿಸಿದ್ದ ರಾಜೇಶ ಜೈನ್ ಮಂಗಳೂರು,ಮಿಲನ್ ಘಟಕದ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಶ್ ಜೈನ್ , ಹಿರಿಯರಾದ ಪಚ್ಚಾಜೆ ಜಿನರಾಜ ಅರಿಗರು ಮಾತನಾಡಿ
ಧರ್ಮದ್ರೋಹಿಗಳುಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದನ್ನು ಖಂಡಿಸಿದರು.
ಸುಭಾಶ್ಚಂದ್ರ ಜೈನ್ ವಂದಿಸಿದರು.ಜಯಕೀರ್ತಿ ಅವರು ಕಾರ್ಯಕ್ರಮ ನಿರೂಪಿಸಿದರು.,



