ಬಂಟ್ವಾಳ: ತಾಲೂಕಿನ  ಶಂಭೂರು ಶಾಲೆಯ ಅಂಗನವಾಡಿಯಲ್ಲಿ ‘ಆಟಿಡ್ ಒಂಜಿ ದಿನ’ ಹಾಗೂ ಸ್ತನ್ಯಪಾನ ಶಿಬಿರ ನಡೆಯಿತು.ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸೂಕ್ಷಿತ್  ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯಾದ  ಲೀಲಾವತಿ, ಅಂಗನವಾಡಿಯ , ಆರೋಗ್ಯ ಇಲಾಖೆಯ ಸಿಎಚ್ ಡಿ ಪವಿತ್ರ, ಆರೋಗ್ಯ ಕಾರ್ಯಕರ್ತೆ  ರಶೀದ ಸ್ತನ್ಯಪಾನ, ಮಗುವಿನ ಆರೈಕೆ ಮತ್ತು ಆಹಾರದ ಬಗ್ಗೆ ಮಾಹಿತಿ ನೀಡಿದರು.ಆಶಾಕಾರ್ಯಕರ್ತೆಯರಾದ  ಪ್ರಮೀಳಾ, ಹೇಮಲತ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

 ಅಂಗನವಾಡಿ ಕಾರ್ಯಕರ್ತೆ  ಪ್ರೇಮರವರು ಸ್ವಾಗತಿಸಿದರು.ಅಂಗನವಾಡಿ ಕೇಂದ್ರದಲ್ಲಿರುವ ನಾಲ್ಕು ಗುಂಪುಗಳಿಗೆ ಆಟೋಟ ಸ್ಪರ್ದೆಯನ್ನು ಏರ್ಪಡಿಸಲಾಯಿತು

 ‘ಭಾಗ್ಯಲಕ್ಷ್ಮಿ’ ಗುಂಪಿನಲ್ಲಿ ಪ್ರಥಮ ಬಹುಮಾನ ಭಾರತಿ ಪ್ರಶಾಂತ್, ದ್ವಿತೀಯ ಬಹುಮಾನ ಭಾರತಿ, ಶ್ರಿ ಲಕ್ಷ್ಮಿ ಗುಂಪಿನಲ್ಲಿ ಪ್ರಥಮ ಬಹುಮಾನ ಧನಲಕ್ಷ್ಮಿ, ದ್ವಿತೀಯ ಬಹುಮಾನ ಗಿರಿಜ, ಶ್ರೀದೇವಿ ಗುಂಪಿನಲ್ಲಿ ಪ್ರಥಮ ಗಿರಿಜ, ದ್ವಿತೀಯ ಬಹುಮಾನ ಸರೋಜ, ವರಲಕ್ಷ್ಮಿ ಗುಂಪಿನಲ್ಲಿ ಪ್ರಥಮ ಶಶಿಕಲ ದ್ವಿತೀಯ ಬಹುಮಾನ ಗೀತ ರವರು ಪಡೆದರು.

 ರಶ್ವಿತ್ ಕರುಣಾಕರ ಇವರು ಅಂಗನವಾಡಿಗೆ ಟೇಬಲ್ ಫ್ಯಾನನ್ನು ಕೊಡುಗೆಯಾಗಿ ನೀಡಿದರು. ಹಿರಿಯ ಸದಸ್ಯೆ  ಗೋಪಿಯವರು ಅಂಗನವಾಡಿ ಕೆಲವು ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದರು.

ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಖಾದ್ಯಗಳನ್ನು ಬಡಿಸಲಾಯಿತು. 

ಅಂಗನವಾಡಿಯ ಇಬ್ಬರು ಗರ್ಭಿಣಿ ಸದಸ್ಯೆಯರಿಗೆ ಅರಶಿನ ಕುಂಕುಮ ಕೊಟ್ಟು ಹಾರೈಸಲಾಯಿತು.

  ಅಂಗನವಾಡಿ ಕಾರ್ಯಕರ್ತೆ  ಸುನೀತಾ ವಂದಿಸಿದರು.

By suddi9

Leave a Reply

Your email address will not be published. Required fields are marked *