ಬಂಟ್ವಾಳ: ದಕ್ಷಿಣ ಭಾರತದ ಪ್ರಸಿದ್ದ ಕ್ಷೇತ್ರಗಳಲ್ಲೊಂದಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಮೂಲ ಅಶಯಕ್ಕೆ ಧಕ್ಕೆಯಾಗದಂತೆ ಇಲ್ಲಿ ನಡೆದಿದೆಯೆಂದು ಆರೋಪಿಸಲಾಗುವ ಅತ್ಯಾಚಾರ ,ಕೊಲೆ ,ಹೂತಿಟ್ಟ ಶವಗಳ ಶೋಧನಾ ಪ್ರಕರಣವನ್ನು ಅತ್ಯಂತ ಸೂಕ್ಷ್ಮತೆಯಲ್ಲಿ ತನಿಖೆ ನಡೆಸಿ, ಸೃಷ್ಠಿಯಾಗಿರುವ ಗೊಂದಲಗಳಿಗೆ ಮುಕ್ತಿ ನೀಡಿ ಪ್ರಕರಣವನ್ನು ಅಂತ್ಯ ಕಾಣಿಸುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆಗೆ ಸೂಕ್ತ ನಿರ್ದೇಶನನೀಡುವಂತೆ ಬಂಟ್ವಾಳ ತಾ.ಪಂ.ಮಾಜಿ ಸದಸ್ಯ,ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಲಿಖಿತ ಮನವಿ ಮಾಡಿದ್ದಾರೆ.

ಅನಾಮಿಕನೊಬ್ಬ ದೇವಸ್ಥಾನದ ಸುತ್ತಮುತ್ತ ಶವಗಳನ್ನು ಹೂತು ಹಾಕಿರುವುದಾಗಿ ನೀಡಿದ ದೂರಿನ ಬಳಿಕ ಸ ವ್ಯಾಪಕವಾಗಿ ಹರಡಿರುವ ಅಪಪ್ರಚಾರದಿಂದಾಗಿ ಕ್ಷೇತ್ರದ ಭಕ್ತರಲ್ಲಿ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಕರ್ನಾಟಕ ಸರಕಾರವು ಎಸ್ .ಐ .ಟಿ ತನಿಖೆಗೆ ಆದೇಶಿಸಿದ್ದು, ಈ ತಂಡ ಅನಾಮಿಕ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಶೋಧ ಕಾರ್ಯ ಸಾಗುತ್ತಿದೆ ಎಂದು ಅವರುಮನವಿಯಲ್ಲಿ ವಿವರಿಸಿದ್ದಾರೆ.
ಒಂದು ಕಡೆಯಲ್ಲಿ ಶವದ ಅವಶೇಷಗಳು ಸಿಕ್ಕಿರುವ ಬಗ್ಗೆ ತಿಳಿದಿಬಂದಿದ್ದು, ಈ ಎಲ್ಲಾ ತನಿಖೆಗಳು ಪಾರದರ್ಶಕ,ಮುಕ್ತವಾಗಿ ನಡೆದು ತಪ್ಪಿತಸ್ಥರು ಎಂದು ಕಂಡು ಬರುವ ಯಾರೇ ಆಗಲೀ ಕಾನೂನು ಪ್ರಕಾರ ಶಿಕ್ಷೆಯಾಗಲೇಬೇಕೆಂದು ಅವರು ಮನವಿ ಒತ್ತಾಯಿಸಿದ್ದಾರೆ.
ಈ ಮಧ್ಯೆ ನಿಷೇಧಿತ ಎಸ್.ಡಿ.ಪಿ.ಐ ಸಂಘಟನೆ,ಅನ್ಯಕೋಮಿನ ಕೆಲವರು , ಎಡಫಂಥೀಯರು ,ಹಿಂದೂ ನಾಸ್ತಿಕರು, ರಾಷ್ಟ್ರ ವಿರೋಧಿಗಳ ಪರವಾಗಿ ನ್ಯಾಯಲಯಗಳಲ್ಲಿ ವಾದಿಸುವ ನ್ಯಾಯವಾದಿಗಳು ಈ ಪ್ರಕರಣವನ್ನು ತಿರುಚಿ ಹಿಂದೂಗಳ ಶೃದ್ದಾ ಕೇಂದ್ರ ಪವಿತ್ರವಾದ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಮತ್ತು ನೇರವಾಗಿ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ,ಹಾಗೆಯೇಕ್ಷೇತ್ರದ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಬಗ್ಗೆಯು ಅಪನಂಬಿಕೆ ಬರುವಂತೆ ಸಾರ್ವಜನಿಕರಲ್ಲಿ ಬಿಂಬಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪ್ರಭು ಕೇಂದ್ರ ಗೃಹ ಸಚಿವರಿಗೆ ರವಾನಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.
ಈ ಪ್ರಕರಣದ ಬಳಿಕ ಅಲ್ಲಲ್ಲಿ ಪರ,ವಿರೋಧವಾದ ಚರ್ಚೆಗಳು ನಡೆಯುತ್ತಿದ್ದು ಘರ್ಷಣೆಗಳು ಉಲ್ಬಣಗೊಳ್ಳುವ ಸಂಭವವಿದೆ .ಈ ಹಿನ್ನಲೆಯಲ್ಲಿ ಎಸ್. ಐ. ಟಿ. ತನಿಖೆಯ ತೀರ್ಪು ಪ್ರಕಟವಾಗುವ ಮುನ್ನ ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಅಪಪ್ರಚಾರ ,ಅಪನಂಬಿಕೆ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಧಾರ್ಮಿಕ ಕೇಂದ್ರದ ಮೇಲಿರುವ ಭಯ ಭಕ್ತಿಗಳಿಗೆ ,ಧಾರ್ಮಿಕ ವಿಧಿವಿಧಾನ,ಪರಂಪರಾಗತವಾದ ಕಟ್ಟುಪಾಡುಗಳಿಗೆ ಧಕ್ಕೆಯಾಗದಂತೆ ಮತ್ತು ಧರ್ಮಧಿಕಾರಿ ಡಾIವೀರೇಂದ್ರ ಹೆಗ್ಗಡೆಯವರ ಅವಹೇಳನ , ಟೀಕೆ ,ಬಹಿರಂಗ ನಿಂದನೆ ಮಾಡದಂತೆಯು ಕರ್ನಾಟಕ ಸರಕಾರ ನೇಮಿಸಿದ ಎಸ್ ಐ ಟಿ ತಂಡವು ಎಚ್ಚರಿಕೆ, ಸೂಕ್ಷ್ಮತೆಯಿಂದ ತನಿಖೆ ನಡೆಸುವಂತೆ ಕರ್ನಾಟಜ ಗೃಹ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಈ ಪ್ರಕರಣವನ್ನು ಅಂತ್ಯ ಕಾಣಿಸಬೇಕು ಎಂದು ಪ್ರಭು ಮನವಿಯಲ್ಲಿ ಕೋರಿದ್ದಾರೆ.
