ಮೂಡುಬಿದರೆ: ದೇವಸ್ಥಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರನ ಜತೆ ಗುರುವಾರ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
BHAVANI
ಪುತ್ತಿಗೆ ಪದವು ನಿವಾಸಿ ಪರಿಶಿಷ್ಟ ಜಾತಿಯ ರಾಮ ಮತ್ತು ವಿಮಲಾ ದಂಪತಿಯ ಪುತ್ರಿ ಭವಾನಿ (27)ಸೋಮವಾರ ಕೊಡ್ಯಡ್ಕ ದೇವಸ್ಥಾನಕ್ಕೆಂದು ಹೋದವಳು ಮನೆಗೆ ಬರದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಹುಡುಗಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಯುವತಿ ತನ್ನ ಮನೆಯವರ ಮೊಬೈಲ್ಗೆ ಕರೆ ಮಾಡಿ ತಾನು ಪ್ರೀತಿಸುತ್ತಿದ್ದ ಯುವಕನ ಜತೆ ಬೆಂಗಳೂರಿಗೆ ಬಂದಿದ್ದು ಅವನನ್ನು ಮದುವೆಯಾಗಿರುತ್ತೇನೆ. ಶುಕ್ರವಾರ ನಾವಿಬ್ಬರು ಊರಿಗೆ ಬರುತ್ತೇವೆ ಎಂದು ತಿಳಿಸಿದ್ದಾಳೆನ್ನಲಾಗಿದೆ. ಯುವತಿ ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *