ಮೂಡುಬಿದಿರೆ : ಪುರಸಭೆಯು ಆಡಳಿತಾಧಿಕಾರಿಯ ಅವಧಿಯಲ್ಲಿದ್ದಾಗ ಸುಮಾರು ಒಂದೂವರೆ ಕೋಟಿ ರೂವಿನ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅವೆಲ್ಲಾ ಕಳಪೆ ಕಾಮಗಾರಿಗಳಾಗಿವೆ ಆ ಅವಧಿಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳನ್ನು, ಇಂಜಿನಿಯರ್ಗಳು ಹಾಗೂ ಥರ್ಡ್ ಪಾರ್ಟಿಯ ಇಂಜಿನಿಯರನ್ನು ಮತ್ತು ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಸದಸ್ಯ ಹನೀಫ್ ಅಲಂಗಾರು ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಇದಕ್ಕೆ ಇನ್ನೊರ್ವ ಸದಸ್ಯ ಕೊರಗಪ್ಪ ಅವರು ಕೂಡಾ ಧ್ವನಿ ಸೇರಿಸಿದ ಬೆಳವಣಿಗೆ ನಡೆದದ್ದು ಗುರುವಾರ ಪುರಸಭಾ ಸಭಾಭವನದಲ್ಲಿ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಪ್ರಕರಣವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ತೀಮರ್ಾನ ಪ್ರಕಟಿಸಿದರು.

ರಾಜಕೀಯ ಮಾಡಬೇಡಿ :
ಕಟ್ಟಡ ಪರಿಶೀಲನೆ ಸಮಿತಿಗೆ ತನ್ನನ್ನು ಕೈಬಿಟ್ಟಿರುವವುದರ ಬಗ್ಗೆ ಮತ್ತು ಸದಸ್ಯರೊರ್ವರು ತನ್ನ ಹೆಸರಿಗೆ ವಿರೋಧ ವ್ಯಕ್ತಪಡಿಸಿರುವುದರ ಬಗ್ಗೆ ಮಾಧ್ಯಮಗಳ ವರದಿಯಿಂದ ತನಗೆ ತಿಳಿದು ಬಂದಿದೆ. ಪುರಸಭೆಯ ಈ ನೀತಿಯಿಂದಾಗಿ ತನಗೆ ನೋವಾಗಿದೆ ಎಂದು ಹಿರಿಯ ಸದಸ್ಯ ಬಾಹುಬಲಿ ಪ್ರಸಾದ್ ಅವರು ಪುರಸಭೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿ ಪುರಸಭಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶೀನ ನಾಯ್ಕ್ ತಾವು ಸಭೆಗೆ ಹಾಜರಾಗಿಲ್ಲದಿರುವುದರಿಂದ ಕಾನೂನಿನ ಪ್ರಕಾರವಾಗಿ ಸಮಿತಿಗೆ ಸೇರಿಸಲಾಗಿಲ್ಲವೆಂದಾಗ ಗರಂ ಆದ ಬಾಹುಬಲಿ ಪ್ರಸಾದ್ ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿಯೇ ಮಾಡುವುದಾದರೆ ಯಾಕೆ ಮೂರು ದಿನಗಳ ಹಿಂದೆ ಸಭೆಗೆ ಬರಲು ನೊಟೀಸ್ ನೀಡಿಲ್ಲ..? ಸಂಸದರನ್ನು ಅಥವಾ ವಿಧಾನಸಭಾ ಸದಸ್ಯರನ್ನು ಮೀಟಿಂಗ್ಗೆ ಆಹ್ವಾನಿಸುತ್ತಿಲ್ಲ..? ನಿಮಗೆ ಅಧಿಕಾರವಿದೆಯೆಂದು ಸಿಕ್ಕಿದಂತೆ ವತರ್ಿಸಿ ರಾಜಕೀಯ ಮಾಡಬೇಡಿ ನಮಗೂ ಕಾನೂನು ಗೊತ್ತಿದೆ ತಾನು ಕೂಡಾ ಹಲವು ವರ್ಷದಿಂದ ರಾಜಕೀಯದಲ್ಲಿದ್ದೇನೆ ಎಂದು ಚಾಟಿ ಬೀಸಿದರು.
ಪುರಸಭೆಯ ಹೊಸ ಆಡಳಿತವು ಅಧಿಕಾರಕ್ಕೆ ಬಂದು 6-7 ತಿಂಗಳಾಗುತ್ತಾ ಬಂದಿದೆ ಆದರೆ ಈ ವರೆಗೆ ತನ್ನ ವಾರ್ಡ್ನಲ್ಲಿ ಯಾವುದೇ ಸಣ್ಣ ಅಭಿವೃದ್ಧಿ ಕಾಮಗಾರಿಯೂ ನಡೆದಿಲ್ಲ. ಉಳಿದ ವಾರ್ಡ್ ಗಳಲ್ಲಿ 5-6 ಕಾಮಾಗಾರಿಗಳಿಗೆ ಅನುದಾನವನ್ನು ನೀಡಲಾಗುತ್ತಿದೆ. ತಾವು ಪ್ರತಿ ಮೀಟಿಂಗ್ನಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದೇನೆ ಆದರೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಈ ಬಾರಿ ಎಸ್ಎಫ್ಸಿ ಯಲ್ಲಿ ಅನುದಾನ ನೀಡಿದ್ದೀರಿ ಉಳಿದ ವಾರ್ಡ್ ನವರಿಗೆ 15 ಲಕ್ಷದವರೆಗಿನ ಕಾಮಗಾರಿಗೆ ಅನುದಾನ ಮೀಸಲಿಡುತ್ತೀರಿ ಎಂದು ಆರೋಪಿಸಿ ಅಧ್ಯಕ್ಷರೇ ನಾವೇನು ಗೌರವಾನ್ವಿತ ಸದಸ್ಯರಲ್ಲವೇ…? ನಾವೇನು ರಾಜಿನಾಮೆ ನೀಡಬೇಕೆ..? ಯಾಕೆ ಕೆಲಸದಲ್ಲಿ ತಾರತಮ್ಯ ಮಾಡುತ್ತಿದ್ದೀರಿ ಎಂದು ಸದಸ್ಯೆ ಪ್ರೇಮಾ ಸಾಲ್ಯಾನ್ ಪುರಸಭಾ ಅಧ್ಯಕ್ಷರನ್ನು ಮತ್ತು ಸ್ಥಾಯಿ ಸಮಿತಿ ಆದ್ಯಕ್ಷರನ್ನು ತರಾಟೆಗೆ ತೆಗೆದುಕೊಂಡು ಎಲ್ಲಾ ವಾರ್ಡ್ ನ ಸದಸ್ಯರಿಗೂ ಸರಿಸಮಾನವಾಗಿ ಅನುದಾನವನ್ನು ಮೀಸಲಿಡಿ ಎಂದು ಆಗ್ರಹಿಸಿದರು.
ಅತಿಕ್ರಮಣ ತೆರವು ಪ್ರಕರಣದಲ್ಲಿ ಫುಟ್ಪಾತ್ನಲ್ಲಿ ವ್ಯಾಪಾರ ಮಾಡುತ್ತಿದ್ದ ಕೆಲವು ಬಡ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಮಾಡಲಾಗಿದೆ ಉಳಿದಂತೆ ಶ್ರೀಮಂತ ವ್ಯಾಪಾರಸ್ಥರು ಹಾಗಯೇ ವ್ಯಾಪಾರ ಮಾಡುತ್ತಿದ್ದಾರೆ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಂಡಿಲ್ಲ. ತೆರವು ಕಾರ್ಯವನ್ನು ಸರಿಯಾಗಿ ಕಾರ್ಯಗತಗೊಳಿಸಿ ಇಲ್ಲದಿದ್ದರೆ ಮನೆಗೆ ನಡೆಯಿರಿ ಎಂದು ಅಧಿಕಾರಿಗಳನ್ನು ಕೊರಗಪ್ಪ ಮತ್ತು ರಮಣಿ ದಬಾಯಿಸಿದರು. ತೆರವಿನ ಸಂದರ್ಭದಲ್ಲಿ ಪುರಸಭಾ ಅಧಿಕಾರಿಗಳ ಮೇಲೆ ಮೊಟ್ಟೆ ಎಸೆದಿದ್ದಾರೆ. ಮುಂದೆ ತೆರವುಗೊಳಿಸಲು ಹೋಗುವಾಗ ಪೊಲೀಸರ ಸಹಕಾರ ಪಡೆಯಿರಿ ಎಂದು ಸಲಹೆ ನೀಡಿದರು. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು,
ಪುರಸಭೆಯ ವಾಣಿಜ್ಯ ಸಂಕೀರ್ಣಗಳ ಬಾಡಿಗೆಯನ್ನು ವಸೂಲಿ ಮಾಡದಿರುವುದರ ಬಗ್ಗೆ ಚರ್ಚೆ ನಡೆದಾಗ ಈಗ ಇರುವ ಬಾಡಿಗೆದಾರರು 45 ಲಕ್ಷದಷ್ಟು ಬಾಕಿ ಇಟ್ಟಿದ್ದರು ಅದರಲ್ಲಿ 30ಲಕ್ಷವನ್ನು ವಸೂಲಿ ಮಾಡಲಾಗಿದೆ ಉಳಿದ 15 ಲಕ್ಷವನ್ನೂ ಒಂದು ತಿಂಗಳೋಳಗೆ ವಸೂಲಿ ಮಾಡಲಾಗುವುದು ಆದರೆ ಪುರಸಭಾ ಸದಸ್ಯರು ಯಾರೂ ಇದರ ಮಧ್ಯೆ ಬರಬಾರದೆಂದು ಮುಖ್ಯಾಧಿಕಾರಿಗಳು ಸೂಚಿಸಿದರು.
ಇದೀಗ ಮೂಡುಬಿದಿರೆ ಪರಿಸರದಲ್ಲಿ ಕಸಗಳು ಹೆಚ್ಚಾಗುತ್ತಿವೆ ಕಸ ವಿಲೇವಾರಿ ಮಾಡುವ ಕಾರ್ಮಿಕರ ಸಮಸ್ಯೆಯ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದಾಗ ಕರಿಂಜೆ-ಕಲ್ಲಬೆಟ್ಟು ಮತ್ತು ಮಾರೂರಿನಲ್ಲಿ ಕಸ ಇಲ್ಲ ಅಲ್ಲಿ ಇದ್ದರೂ ಮನೆಯವರೇ ತಮ್ಮ ಜಾಗದಲ್ಲಿ ವಿಲೇವಾರಿ ಮಾಡುತ್ತಾರೆ ಆದ್ದರಿಂದ ಪುರಸಭೆಯವರು ವಿಲೇವಾರಿ ಮಾಡುವ ಅಗತ್ಯವಿಲ್ಲ ಅಲ್ಲಿಯವರಿಂದ ಹಣ ಸಂಗ್ರಹ ಮಾಡುವುದು ಬೇಡ ಯಾರೂ ಕಸ ನೀಡುತ್ತಾರೋ ಅವರಿಗೆ ಮಾತ್ರ ಚಾಚರ್್ ಮಾಡಿ ಎಂದು ಸದಸ್ಯ ದಿನೇಶ್ ಪೂಜಾರಿ ಮತ್ತು ಹರಿಣಾಕ್ಷಿ ಸುವರ್ಣ ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಪುರಸಭಾಧಿಕಾರಿಗಳು ತ್ಯಾಜ್ಯ ನಿರ್ವಹಣೆಯ ಹೊಸ ಸಮಿತಿಯನ್ನು ಸಭೆ ಕರೆದು ಅದರಲ್ಲಿ ನಿರ್ಣಯ ಮಾಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಪುರಸಭಾ ಸದಸ್ಯರುಗಳಾದ ರತ್ನಾಕರ ದೇವಾಡಿಗ, ಸುರೇಶ್ ಕೋಟ್ಯಾನ್, ಪಿ.ಕೆ.ಥೋಮಸ್, ಮನೋಜ್ ಶೆಟ್ಟಿ,, ಅನಿಲ್ ಲೋಬೊ, ನಾಮನಿರ್ದೇಶಿತ ಸದಸ್ಯರಾದ ಸುಂದರ ಸಾಲ್ಯಾನ್, ಉಮೇಶ್ ದೇವಾಡಿಗ, ಆಲ್ವಿನ್ ಮಿನೇಜಸ್ ಸಹಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ತೆರವು ಮಾಡಿಸಿದ್ದೇಕೆ?… ವಾಹನ ನಿಜಕ್ಕೂ ಬೇಕೆ?!
ಅಧ್ಯಕ್ಷರ ಗಂಡನಿಗೆ ವಾಹನ ಪಾರ್ಕಿಂಗ್ ಮಾಡುವಾಗ ತೊಂದರೆ ಆಗಿರುವುದಕ್ಕೆ ತೆರವು ಕಾರ್ಯವನ್ನು ಕೈಗೊಂಡಿರುವುದಾಗಿ ಎಲ್ಲರೂ ಹೇಳುತ್ತಿದ್ದಾರೆ ಒಬ್ಬರಿಗೆ ತೊಂದರೆ ಆಗಿದಕ್ಕೆ ಅದೇ ದಿನದಂದು ತೆರವುಗೊಳಿಸಿದ್ದು ಸರಿಯೇ..? ತಾವು ತೆರವು ಕಾರ್ಯವನ್ನು ಆರಂಭಿಸಿದ್ದು ಎಲ್ಲಿಂದ?! ಎಂದು ಸಭೆಯಲ್ಲಿ ಗಮನ ಸೆಳೆದವರು ಸದಸ್ಯ ಪ್ರಸಾದ್. ಇನ್ನೊಂದೆಡೆ ಪುರಸಭೆಯ ಅಧ್ಯಕ್ಷರಿಗೆ ಹೊಸ ವಾಹನವನ್ನು ಖರೀದಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಬಂದಾಗ ವಿರೋಧ ವ್ಯಕ್ತಪಡಿಸಿದ ಸದಸ್ಯೆ ರಮಣಿ ಅವರು ಅಧ್ಯಕ್ಷರಿಗೆ ಯಾಕೆ ಹೊಸ ಗಾಡಿ ಈಗ ಇರುವ ವಾಹನವೇ ಸಾಕು ಅವರಿಗೆ ಮನೆಯಿಂದ ಪುರಸಭೆಗೆ, ಪುರಸಭೆಯಿಂದ ಮನೆಗೆ ಹೋಗಲು ಮಾತ್ರ ಅಲ್ಲವೆ ಅವರೇನು 23 ವಾರ್ಡ್ ಗಳಿಗೆ ಭೇಟಿ ನೀಡುತ್ತಾರೆಯೇ ಮೊದಲು ಅವರು ಎಲ್ಲಾ ವಾರ್ಡ್ ಗಳನ್ನು ನೋಡಿಕೊಂಡು ಬರಲಿ ಎಂದು ಸಲಹೆಯಿತ್ತರು.
