ಬಂಟ್ವಾಳ: 2025 – 26 ನೇ ಸಾಲಿನ ಮರುವಿನ್ಯಾಸಗೊಳಿಸಲಾದ  ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆ ಮತ್ತು ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆಯ ಪ್ರೀಮಿಯಂ ಪಾವತಿಸುವ   ದಿನಾಂಕವನ್ನು 2025 ಆಗಸ್ಟ್  30 ರ ವರೆಗೆ  ವಿಸ್ತರಿಸಿ ತೋಟಗಾರಿಕೆ ಇಲಾಖೆ ಆದೇಶಿಸಿದ್ದು , ಬೆಳೆ ವಿಮೆ ಪ್ರೀಮಿಯಂ ಪಾವತಿಸದ ರೈತರಿಗೆ ಅವಕಾಶ ಕಲ್ಪಿಕೊಡಲಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆ ವಿಮೆ ಬಗ್ಗೆಗಿನ ಪ್ರೀಮಿಯಂ ಪಾವತಿಸಲು ಬಾಕಿ ಉಳಿದಿರುವ ರೈತರು ವಿಮೆ ಪ್ರೀಮಿಯಂ ಕಂತನ್ನು  ಇದೇ ತಿಂಗಳು  30 ರ ಒಳಗೆ ಸಂಬಂಧ ಪಟ್ಟ ತಮ್ಮ ಕಾರ್ಯ ವ್ಯಾಪ್ತಿಯ ಪ್ರಾರ್ಥಮಿಕ ಸಹಕಾರ ಸಂಘಗಳಲ್ಲಿ ಪಾವತಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆಯು ಅವರು ಈ ಮೂಲಕ ವಿನಂತಿಸಿದ್ದಾರೆ. 

By suddi9

Leave a Reply

Your email address will not be published. Required fields are marked *