ಬಂಟ್ವಾಳ : ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಇದರ 5 ನೇ ವರ್ಷದ ಪ್ರಯುಕ್ತ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ಎಂಬ ವಿಶೇಷ ಕಾರ್ಯಕ್ರಮ ಕಡೇಶಿವಾಲಯ ಗ್ರಾಮದ ಪುಣ್ಕೆದಡಿ ಎಂಬಲ್ಲಿ ಟ್ರಸ್ಟ್ ಅಧ್ಯಕ್ಷರಾದ ಯಶವಂತ್ ಸಾಲಿಯಾನ್ ಪತ್ತುಕೊಡಂಗೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ತನಿಯಪ್ಪ ಪೂಜಾರಿ ಅವರು ಹೊಸಮನೆ ಬಿಳಿಯೂರು ಬೇಸಾಯದ ಗದ್ದೆಗೆ ಹಾಲು ಏರೆದು, ನೇಜಿ ನಾಟಿಗೈದು ಚಾಲನೆ ನೀಡಿ ಮಾತನಾಡಿ, ಕೃಷಿ ಕ್ಷೇತ್ರದತ್ತ ಯುವ ಜನತೆಯ ಹೆಚ್ಚು,ಹೆಚ್ಚು ಗಮನ ಕೊಡಬೇಕೆಂದರು. ಕಡೇಶಿವಾಲಯ ಗ್ರಾಮ
ಪಂಚಾಯತ್ ಅಧ್ಯಕ್ಷೆ ಭಾರತಿ ರಾವ್, ಸದಸ್ಯರುಗಳಾದ ಸೀನ ನಾಯ್ಕ್ ನೆಕ್ಕಿಲಾಡಿ, ಹರಿಶ್ಚಂದ್ರ ಕಾಡಬೆಟ್ಟು, ಹರಿಣಾಕ್ಷಿ ಪೆರ್ಲಾಪು,ವಶೀತಾ ನೆತ್ತರ, ಪೆರ್ಲಾಪು ಶಾಲಾ ಮುಖ್ಯ ಶಿಕ್ಷಕ ಬಾಬು ಪೂಜಾರಿ, ಟ್ರಸ್ಟಿನ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಕಲ್ಲಾಜೆ, ಟ್ರಸ್ಟಿಗಳಾದ ಲೋಕನಾಥ ಪೂಜಾರಿ ತಿಮರಾಜೆ, ವಿದ್ಯಾಧರ ಪೂಜಾರಿ ಅಣ್ಣೆಂಗಳ, ಪ್ರಧಾನ ಸಂಚಾಲಕರಾದಂತಹ ದಿನೇಶ್ ಪೂಜಾರಿ ಸುರ್ಲಾಜೆ, ಕಾರ್ಯದರ್ಶಿ ಸಂದೇಶ ಪೂಜಾರಿ ಕುಂಡಾಜೆ, ಮಾಣಿ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ ಪೂಜಾರಿ ಸೂರ್ಯ, ನಾರಾಯಣ ಸಾಲಿಯಾನ್, ಹರೀಶ್ ಬಾಕಿಲ, ಪೆರ್ಲಾಪು ಶಾಲಾ ದೈಹಿಕ ಶಿಕ್ಷಕ ಭಾಸ್ಕರ ನಾಯ್ಕ್, ಮೊದಲಾದ ಗಣ್ಯರುಭಾಗವಹಿಸಿದ್ದರು.
ಸಂಘಟನೆಯು ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಹಡಿಲು ಬಿದ್ದ ಗದ್ದೆಯನ್ನು ಗುರುತಿಸಿ ಭತ್ತದ ನಾಟಿಗೈದು ಅದರಲ್ಲಿ ಬರುವ ಆದಾಯವನ್ನು ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಯುವಕ,
ಯುವತಿಯರು ಮತ್ತು ಮಕ್ಕಳಿಗೆ ಕೆಸರುಗದ್ದೆಯಲ್ಲಿ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬು” ಎನ್ನುವ ವಿವಿಧ ಕ್ರೀಡಾಕೂಟಗಳು ಜರಗಿತು.
