ಬಂಟ್ವಾಳ : ತಾಲೂಕಿನ ಬಾಳ್ತಿಲ ಗ್ರಾಮದ ಕಂಟಿಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸತ್ಯಸಾಯಿ ಬಾಬಾ ದಕ್ಷಿಣ ಕನ್ನಡದ ಸೇವಾ ಸಂಸ್ಥೆಗಳ ವತಿಯಿಂದ’ ಸತ್ಯಸಾಯಿ ಬಾಬಾ ಅವರ  ಜನ್ಮ ಶತಾಬ್ದಿಯ ಪ್ರಯುಕ್ತ  “ಪ್ರೇಮ ತರು” ಗಿಡ ನಾಟಿ ಕಾರ್ಯಕ್ರಮ ಮಂಗಳವಾರ ನಡೆಯಿತು.


ಶಾಲೆಯ  75 ಸೆನ್ಸ್ ಜಮೀನಿನಲ್ಲಿ ಸುಮಾರು 170 ಅಡಿಕೆ ಗಿಡಗಳು,10 ತೆಂಗಿನ ಗಿಡ, 25ಕ್ಕು ಮಿಕ್ಕಿ ಹಣ್ಣಿನ ಗಿಡಗಳನ್ನು ನೆಡಲಾಯಿತುಸತ್ಯಸಾಯಿ ಸಂಸ್ಥೆಗಳ ಕರ್ನಾಟಕ ರಾಜ್ಯ ಉತ್ತರ ವಿಭಾಗದ ರಾಜ್ಯ ಮಹಿಳಾ ಸೇವಾ ಸಂಯೋಜಕ  ಪ್ರಿಯಾ ಪೈ ಅವರು ಗಿಡನಾಟಿಗೆ ಚಾಲನೆ ನೀಡಿ ಮಾತನಾಡಿ,  ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಾಬ್ದಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಗಿಡ ನಾಟಿ ಮಾಡಲಾಗುತ್ತಿದ್ದು, ಇದರ ಪೋಷಣೆಯ ಜವಾಬ್ದಾರಿ ಶಾಲಾಭಿವೃದ್ಧಿ ಸಮಿತಿ ಹಾಗೂ  ಶಾಲಾಭಿಮಾನಿಗಳಿಗೆ ಸೇರಿದೆ ಎಂದರು.


ಶ್ರೀ ಸತ್ಯ ಸಾಯಿ ಬಾಬಾ ಸೇವಾ  ಸಂಸ್ಥೆಯ ಜಿಲ್ಲಾ ಶೈಕ್ಷಣಿಕ ಸಂಯೋಜಕಿ  ಮೂಕಾಂಬಿಕಾಎನ್ ರಾವ್, ಜಿಲ್ಲಾ ಮಹಿಳಾ ಸೇವಾ ಸಂಯೋಜಕಿ  ಶಾಂತಿ ಭಟ್, ಜಿಲ್ಲಾ ಆಧ್ಯಾತ್ಮಿಕ ಸಂಯೋಜಕಿ  ಮುಕ್ತಾಕಿಣಿ ,ಯುವ ಸಂಯೋಜಕಿ  ವೀಣಾ ಲಕ್ಷ್ಮಿ ಭಟ್, ಜಿಲ್ಲಾಧ್ಯಕ್ಷ ಪ್ರಸನ್ನ ಭಟ್, ಜಿಲ್ಲಾ ಉಪಾಧ್ಯಕ್ಷ ಮಹಾಬಲೇಶ್ವರ  ಭಟ್,ರಾಜ್ಯ ಸೇವಾ ಸಯೋಜಕ ಚಂದ್ರಶೇಖರ ನಾಯಕ್, ಜಿಲ್ಲಾ ಪುರುಷ ಸೇವಾದಳ ಸಂಯೋಜಕ ದುರ್ಗಾ ಪ್ರಸಾದ್ , ಪುತ್ತೂರು,ಬಂಟ್ವಾ, ಮುಡಿಪು ಮತ್ತು ಮಂಗಳೂರು ಸೇವಾ ಸಮಿತಿಯ ಸೇವಾ ದಳದ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ,ಉಪಾಧ್ಯಕ್ಷೆ ಲಕ್ಷ್ಮಿ , ಬಿ.ಆರ್.ಸಿಸುರೇಖ,ಗ್ರಾಮ ಪಂಚಾಯತ್ ಸದಸ್ಯ ರಾಜೀವ,ಮಾಜಿ ಎಸ್. ಡಿ. ಎಂ. ಸಿ ಅಧ್ಯಕ್ಷ ರಾಜೇಶ,ಹಿರಿಯರಾದ ಜನಾರ್ಧನ, ಕಲ್ಲಡ್ಕ ಶೌರ್ಯ ವೀಪತು ಘಟಕ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ತುಳಸಿ, ಸೌಮ್ಯ, ಧನಂಜಯ, ಚಿನ್ನಾ ಮೊದಲಾದವರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚೇತನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *