ಬಂಟ್ವಾಳ: ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬಿ.ಮೂಡ ವಲಯ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಬಿ.ಸಿ.ರೋಡಿನ ಆಡಳಿತ ಸೌಧಕಚೇರಿಯ ಮುಂಭಾಗದಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ,ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಾಮಾನ್ಯ ಜನರ ಪರವಾದ ಯೋಜನೆಗಳನ್ನೇ ಜಾರಿಗೆ ತಂದಿದೆ ಎಂದು ತಿಳಿಸಿದರುತುರ್ತ ಪರಿಸ್ಥಿತಿಯ ಕಾಲದಲ್ಲಿ ಜಮೀನ್ ದಾರರಿಗೆ ಅನ್ಯಾಯವಾಗಿರಬಹುದೇ ಹೊರತು ಸಾಮನ್ಯ ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ ಅವರಿ ಜನರಿಗೆ ಸುಳ್ಳು ಹೇಳಿ,ಅಪಪ್ರಚಾರ ಮಾಡಿಯೇ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ವಕ್ತಾರರಲ್ಲೋರ್ವರಾದಎಂ.ಜಿ.ಹೆಗ್ಡೆ ಮಾತನಾಡಿ,ಬಿಜೆಪಿಗೆ ನಿರ್ದಿಷ್ಟವಾದ ಸಿದ್ದಾಂತ ಇಲ್ಲ,ಹಿಂದುತ್ವ ಅವರ ಮಹಾಸುಳ್ಳಿನ ಏಜೆಂಡಾ ಇಲ್ಲ ಬಿಜೆಪಿಗೆ ಸುಳ್ಳೆ ಮನೆದೇವರು ಎಂದುಟೀಕಾ ಪ್ರಹಾರಗೈದರು.
ಸಿದ್ದರಾಮಯ್ಯ ಸರಕಾರದ ಕಠಿಣ ಕ್ರಮಕೈಗೊಂಡು ಜಿಲ್ಲೆಗಾಗಮಿಸಿದ ಖಡಕ್ ಅಧಿಕಾರಿಗಳು ಬಂದ ಬಳಿಕ ಬಿಜೆಪಿ,ಸಂಘಪರಿವಾರ ಮುಖಂಡರಉದ್ರೇಕಕಾರಿ ಭಾಷಣ ಬಂದಾಗಿದೆ.ಅಕ್ರಮ ದಂಧೆಗಳಿಂದ ಬರುವ ಹಣದ ಮೂಲಗಳ ದಾರಿಗಳು,ಕೋಮುವಾದದ ಅಂಗಡಿಗಳು ಮುಚ್ಚಿದೆ ಎಂದು ಹೇಳಿದ ಅವರು ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಮರಸ್ಯದ ಪ್ರಯೋಗ ಶಾಲೆ ತೆರೆಯಲಿದೆ ಎಂದರು.
ಕೆ.ಪಿ.ಸಿ.ಸಿ.ವಕ್ತಾರ ಸುದೀರ್ ಕುಮಾರ್ ಮುರೊಳ್ಯ ಮಾತನಾಡಿ, ಮಂಗಳೂರಿನಲ್ಲಿತಾಂಟುವ ಎರಡು ಗುಂಪಿನ ವಿರೋಧಬಾಸದಿಂದ ಗಲಭೆ ನಡೆಯುತ್ತಿದೆ. ಬಂಟ್ವಾಳ ಕೇತ್ರದಲ್ಲಿ ಏಳುವರ್ಷಗಳಲ್ಲಿ ದಲ್ಲಿ ಕ್ರೈಂ ರೇಟ್ ಹೆಚ್ಚಾಗಿದ್ದು ಬಿಟ್ಟರೆ,ಬಿಜೆಪಿಯ ಕೊಡುಗೆ ಏನು? ಸರಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆ ಕಾರ್ಯಕರ್ತರಿಗೆ ಸ್ವಾಭಿಮಾನದ ಕಾರ್ಯಕ್ರಮವಾಗಿದೆ ಎಂದರು.
ಬಂಟ್ವಾಳ ತಾಲೂಕಿನ ಸುತ್ತ ಎತ್ತ ಕಣ್ಣು ಹಾಯಿಸಿದರೂ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ಕಾಣುತ್ತಿವೆ.ಸುಮಾರು 20 ಸಾವಿರ ಜನರಿಗೆ ಹಕ್ಕು ಪತ್ರ ನೀಡಿರುವ ಸಾಧನೆ ಬಿ.ರಮಾನಾಥ ರೈ ಅವರಿಗೆ ಸಲ್ಲುತ್ತದೆ ಬಿಜೆಪಿ ಆಡಳಿತದ ಅವಧಿಯಲ್ಲಾಗಿರುವ ತಪ್ಪುಗಳನ್ನು ಕಾಂಗ್ರೇಸ್ ಹೆಗಲ ಮೇಲೆ ಹಾಕದಿರಿ ಎಂದರು
ಕೆಪಿಸಿಸಿ ಸದಸ್ಯರಾದ ಅಶ್ವನಿಕುಮಾರ್ ರೈ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಅಂಚನ್,,ಪುರಸಭಾಧ್ಯಕ್ಷ ವಾಸು ಪೂಜಾರಿ,ಬೂಡಾ ಅಧ್ಯಕ್ಷ ಬೇಬಿ ಕುಂದರ್ , ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಜಯಂತಿ ಪೂಜಾರಿ,ಪಕ್ಷದ ಪ್ರಮುಖರಾದಅಬ್ಬಾಸ್ ಆಲಿ, ನವಾಜ್ ಬಡಕಬೈಲ್, , ಐಡಾಸುರೇಶ್, ಸುಭಾಶ್ಚಂದ್ರ ಶೆಟ್ಟಿ, ಸುದರ್ಶನ ಜೈನ್, ಲವಿನಾ ಮೋರಾಸ್, ಸಪ್ವಾನ್, ವಿನಯಕುಮಾರ್ ಸಿಂದ್ಯಾ,ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್,ಶ್ರೀಜಿತ್, ಸಂಜೀವ ಪೂಜಾರಿ ಬೊಳ್ಳಾಯಿ,ಸದಾಶಿವ ಬಂಗೇರ,ಮಾಯಿಲಪ್ಪ ಸಾಲಿಯಾನ್,ಮಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿ,ಜಗದೀಶ್ ಕುಂದರ್ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
