ಬಂಟ್ಟಾಳ:ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಗುರುವಾರ ನೂರಾರು ಮಂದಿ ತೀರ್ಥಸ್ನಾನಗೈದರು.ಕ್ಷೇತ್ರದ ತಂತ್ರಿಗಳಾದ ಕೇಶವ ಶಾಂತಿ, ಅಧ್ಯಕ್ಷ ರಾಜ್ ಬಂಟ್ವಾಳ್, ವ್ಯವಸ್ಥಾಪಕ ಸಂಜೀವ ಸಪಲ್ಯ, ಕಾರ್ಯದರ್ಶಿ ಮನೋಜ್ ಕೇದಿಗೆ, ಖಜಾಂಚಿ ಕಿಶೋರ್ ಕಲ್ಯಾಣಗ್ರಹಾರ ,ಸಹ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ ಮತ್ತು ಪ್ರಮುಖರು ಉಪಸ್ಥಿತರಿದ್ದರು.

ನೀಲಕಂಠದಲ್ಲಿ ವಿಶೇಷ ಪೂಜೆ
ಬಂಟ್ವಾಳ: ತಾಲೂಕಿನವಾಮದಪದವು ನೀಲಿ ನೀಲಕಂಠೇಶ್ವರ ದೇವರ ಸನ್ನಿಧಾನದಲ್ಲಿ ಆಟಿ ಅಮವಾಸ್ಯೆ ಪ್ರಯುಕ್ತ ವಿಶೇಷ ತೀರ್ಥ ಸ್ನಾನ ಮತ್ತು ಶ್ರೀ ದೇವರಿಗೆ ಸಿಯಾಳಾಭಿಷೇಕ, ವಿಶೇಷ ಪೂಜೆ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ಅರ್ಚಕರಾದ ಸುಬ್ರಮಣ್ಯ ಉಡುಪ, ಸಮಿತಿಯ ಸದಸ್ಯರಾದ ಯಶೋಧರ ಶೆಟ್ಟಿ,ಪ್ರಶಾಂತ್ ಪೂಜಾರಿ ಪಡ್ಡಾಯಿಬಾಕಿಮಾರು,ಪುರುಷೋತ್ತಮ್ ಶೆಟ್ಟಿಬಾರೇಕ್ಕಿನಡಿ, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು,ಪುರಂದರ ಶೆಟ್ಟಿ ಬಾರೆಕ್ಕಿನಡಿ,ಭುವನೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ನಾರಾಯಣ ಶೆಟ್ಟಿ ಪರಾರಿ, ಮೋಹದಾಸ್ ಗಟ್ಟಿ ಪೋರಿಗುಡ್ಡೆ ಮೊದಲಾದವರಿದ್ದರು.
ಸಜೀಪಮೂಡದಲ್ಲಿ…
ಸಜೀಪ ಮೂಡ ಗ್ರಾಮದ ಈಶ್ವರಮಂಗಳಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಶ್ರೀ ರುದ್ರ ಸೂಕ್ತ ಸಹಿತ ಫಲ ಪಂಚಾಮೃತ ಅಭಿಷೇಕ ,ಶ್ರೀ ದೇವರಿಗೆ ವಿಶೇಷ ಪೂಜೆ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿದ್ದು ವ್ಯವಸ್ಥಾಪನ ಸಮಿತ ಅಧ್ಯಕ್ಷ ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು
