ಬಂಟ್ವಾಳ: ತುಳುಕೂಟ ಬಂಟ್ವಾಳ ಮತ್ತು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಸಹಯೋಗದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಪಾಲೆದ ಕೆತ್ತೆಯ ಕಷಾಯ ವಿತರಣೆಯು ಗುರುವಾರ ಬೆಳಗ್ಗೆ ಬಿ.ಸಿ.ರೋಡ್ ನ ಶ್ರೀ ರಕ್ತೇಶ್ವರಿ ದೇವಸ್ಥಾನದ ಅವರಣದಲ್ಲಿ ನಡೆಯಿತು.

ದೇವಳದ ಪ್ರಧಾನ ಅರ್ಚಕರಾದ ರಘುಪತಿ ಭಟ್ ಪೂಜೆ ನೆರವೇರಿಸಿದ ನಂತರ ಕಷಾಯ ವಿತರಣೆಗೆ ಚಾಲನೆ ನೀಡಿದ್ದು,ಬಳಿಕ ಸಾರ್ವಜನಿಕರಿಗೆ ಕಷಾಯ ವಿತರಿಸಲಾಯಿತು.ಬಿ.ಸಿ.ರೋಡು ಸುತ್ತ ಮುತ್ತಲಿನ ಸುಮಾರು 500 ಕ್ಕಿಂತಲೂ ಹೆಚ್ಚು ಜನರು ಹಾಳೆ ಮದ್ದು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ವಿಶ್ವನಾಥ್,ಪ್ರಮುಖರಾದ ಕೆ.ಸೀತಾರಾಮ್ ಶೆಟ್ಟಿ, ಎನ್.ಶಿವಶಂಕರ್, ಸುಭಾಶ್ಚಂದ್ರ ಜೈನ್, ರಾಜೇಶ್ ಎಲ್. ನಾಯಕ್, ಸೇಷಪ್ಪ ಮಾಸ್ಟರ್ ತುಂಬೆ, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಪದ್ಮನಾಭ ರೈ, ಸತೀಶ್ ಕುಮಾರ್ ಕಾರ್ತಿಕ್, ಪರಮೇಶ್ವರ ಮೂಲ್ಯ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ದಾಮೋದರ್ ಮಾಸ್ಟರ್ ಏರ್ಯ, ಸ್ವಜೇಶ್ ಜೈನ್, ಸನ್ಮತಿ ಜೆ.ಜೈನ್ ಉಪಸ್ಥಿತರಿದ್ದರು. ತುಳುಕೂಟದ ಕಾರ್ಯದರ್ಶಿ ಎಚ್.ಕೆ. ನಯನಾಡು ಸ್ವಾಗತಿಸಿ,ವಂದಿಸಿದರು.
