ಬಂಟ್ವಾಳ; ಕೃಷಿ ಇಲಾಖೆ ಬಂಟ್ವಾಳ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ “ಮಣ್ಣು ಅರೋಗ್ಯಮತ್ತು ಫಲವತ್ತತೆ ತರಬೇತಿ ಹಾಗೂ ಕೃಷಿ ಇಲಾಖೆಯ 2025-26ಸಾಲಿನ ಆತ್ಮ ಯೋಜನೆಯಡಿಯಲ್ಲಿ ರೈತರ ಪಾಠ ಶಾಲೆ ಕಾರ್ಯಕ್ರಮವು ಗೋಳ್ತಮಜಲು ಗ್ರಾಮದ ದೇವಸ್ಯ ಮೋನಪ್ಪ ಪೂಜಾರಿ ಅವರ ಮನೆಯಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದದೇವಸ್ಯ ಮೋನಪ್ಪ ಪೂಜಾರಿ, ಪುರಂದರ ಪಂಡಿತ್ ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಅಂಚನ್,ತಾಲೂಕು ಕೃಷಿ ಅಧಿಕಾರಿ ನಂದನ್ ಶೆಣೈ ತಾಂತ್ರಿಕ ಸಹಾಯಕರಾದ ಹನುಮಂತ್ ಕಾಳಗಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಗೋಳ್ತಮಜಲು ಕೃಷಿ ಸಖಿ ಪುಷ್ಪಾವತಿ. ಪಿ ಸ್ವಾಗತಿಸಿದರು. ವೀರಕಂಭ ಗ್ರಾಮದ ಪಶುಸಕಿ ವಂದಿಸಿದರು. ಗೋಳ್ತಮಜಲು ಕೃಷಿ ಸಖಿ ಕಾರ್ಯಕ್ರಮ ನಿರೂಪಿಸಿದರು
