ಪೊಳಲಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಮಕ್ಕಳಿಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಆ 02ರಂದು ಶನಿವಾರ ರಾಮಕೃಷ್ಣ ತಪೋವನದಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ಮತ್ತು ಛದ್ಮವೇಷ ಸ್ಪರ್ಧೆಯನ್ನು ಆ.16. ರಂದು ಶನಿವಾರ ಮಧ್ಯಾಹ್ನ ಏರ್ಪಡಿಸಲಾಗಿದೆ. 11 ರಿಂದ 21 ವರ್ಷದೊಳಗಿನ ಮಕ್ಕಳು ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

13 ವರ್ಷದೊಳಗಿನ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಸ್ಪರ್ಧೆಯ ವಿಷಯವನ್ನು ಕೆಳಗೆ ನೀಡಲಾಗಿದೆ. ಛದ್ಮವೇಷ ಸ್ಪರ್ಧೆಗೆ ಕೃಷ್ಣ ಮತ್ತು ಅವನ ಜೀವನವನ್ನು ಆಧರಿಸಿದೆ. ಪ್ರಬಂಧವನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಬರೆಯಬಹುದು. ಭಾಗವಹಿಸುವವರು ಅಗತ್ಯವಿರುವ ಸಾಮಾಗ್ರಿಗಳಾದ ಪೆನ್ಸಿಲ್, ರಬ್ಬರ್, ಪೆನ್ನು, ಸೈಲ್, ಸ್ಕೆಚ್ ಪೆನ್ನುಗಳನ್ನು ತರಬೇಕಾಗಿ ವಿನಂತಿಸಲಾಗಿದೆ. ಚಿತ್ರ ಬಿಡಿಸಲು ಮತ್ತು ಪ್ರಬಂಧ ಬರೆಯಲು ಕಾಗದವನ್ನು ಆಶ್ರಮದ ವತಿಯಿಂದ ನೀಡಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳ ಪಟ್ಟಿಯನ್ನು ಅವರ ವಯಸ್ಸು, ತಂದೆ ಅಥವಾ ತಾಯಿಯ ಹೆಸರು ಮತ್ತು ತರಗತಿಯೊಂದಿಗೆ ಜು. 29 ರಂದು ಅಥವಾ ಅದರ ಮೊದಲು ಕಳುಹಿಸಲು ವಿನಂತಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. (ವಯಸ್ಸು 11-14, 15-18 ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರು. ಇದು ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳಿಗೆ ಅನ್ವಯಿಸುತ್ತದೆ). ಪ್ರತೀ ಗುಂಪಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಬಹುಮಾನಗಳನ್ನು ಆ. 16. ರಂದು ಶನಿವಾರ ಸಂಜೆ 5.30ಕ್ಕೆ ನೀಡಲಾಗುವುದು. ಯಾವುದೇ ಸ್ಪರ್ಧೆಗೆ ಸ್ಥಳದಲ್ಲೇ ನೋಂದಣಿ ಇರುವುದಿಲ್ಲ.



By suddi9

Leave a Reply

Your email address will not be published. Required fields are marked *