ಕೈಕಂಬ:ಯುವವಾಹಿನಿ (ರಿ) ಕೂಳೂರು ಘಟಕ ಮತ್ತು ಎ.ಆರ್.ಟಿ ಫ್ರೆಂಡ್ಸ್ ಬಳ್ಳಾಜೆ, ಕುಪ್ಪೆಪದವು ಇವರ ಜಂಟೀ ಸಹಯೋಗದಲ್ಲಿ 4ನೇ ವರ್ಷದ ಹಳ್ಳಿಡೊಂಜಿ ದಿನ ಕಾರ್ಯಕ್ರಮ ಯುವವಾಹಿನಿ ಘಟಕದ ಮಾತೃ ಸ್ಪರ್ಶದ ನಿರ್ದೇಶಕರ ತಿಮಿರಿ ಮನೆಯಲ್ಲಿ ಭಾನುವಾರ ನಡೆಯಿತು.

ಹಿರಿಯಕೃಷಿಕ ಚಂದ್ರಹಾಸ ಕರ್ಕೇರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸರು ಗದ್ದೆಗೆ ಹಾಲೆರೆಯುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ನಾಟಿ ವೈದ್ಯ ಶ್ರೀಧರ್ ಪೂಜಾರಿ ತಿಮಿರಿ, ಕೃಷಿಕರಾದ ಜೀವರಾಜ್ ಕಂಬಳಿ, ಥಾಮಸ್ ಲೋಬೊ ಮತ್ತು ಎಆರ್ ಟಿ ಫ್ರೆಂಡ್ಸ್ ಅಧ್ಯಕ್ಷ ಜಿತೇಶ್ ಜೈನ್ ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಯುವವಾಹಿನಿ ರಿ ಕೂಳೂರು ಘಟಕದ ಅಧ್ಯಕ್ಷ ಲತೀಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯುವವಾಹಿನಿ ಘಟಕದ ಮಾತೃ ಸ್ಪರ್ಶದ ನಿರ್ದೇಶಕಿ ವೀಣಾ ಭಾಸ್ಕರ್,ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ, ಮಾಜಿ ಅಧ್ಯಕ್ಷ ಸತೀಶ್ ಬಳ್ಳಾಜೆ, ನಾಟಿ ವೈದ್ಯ ಶ್ರೀಧರ್ ಪೂಜಾರಿ, ಕೃಷಿಕ ಜೀವರಾಜ್ ಕಂಬಳಿ, ಉದ್ಯಮಿ ಪುನೀತ್ ಕಟ್ಟೆಮಾರ್, ರತ್ನಗಿರಿ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ತಾರಾನಾಥ್, ಕಾರ್ಯಕ್ರಮದ ಸಂಚಾಲಕ ವಿಘನೇಶ್ ಕುಮಾರ್ ಬೋಳೂರು, ಎಆರ್ ಟಿ ಫ್ರೆಂಡ್ಸ್ ಅಧ್ಯಕ್ಷ ಜಿತೇಶ್ ಜೈನ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕೃಷಿಕ ಚಂದ್ರಹಾಸ ಕರ್ಕೇರ, ಕವಿತಾ ದಂಪತಿಗಳನ್ನು ಗೌರವಿಸಲಾಯಿತು. ಕೆಸರುಗದ್ದೆ ಓಟ, ಪಾಲೆ ಓಟ, ಮೂರು ಕಾಲಿನ ಓಟ, ಹಗ್ಗ ಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ಪುರುಷರಿಗೆ ವಾಲಿಬಾಲ್, ಕಬ್ಬಡಿ, ಮಹಿಳೆಯರಿಗೆ ತ್ರೋಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎ.ಆರ್.ಟಿ ಫ್ರೆಂಡ್ಸ್ ಸರ್ವ ಸದಸ್ಯರು, ಯುವವಾಹಿನಿ ಕೂಳೂರು ಘಟಕದ ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು. ಕ್ರೀಡೆಗಳನ್ನು ಘಟಕದ ಉಪಾಧ್ಯಕ್ಷ ಮುಕೇಶ್ ನಿರ್ವಹಿಸಿದರು. ಘಟಕದ ಮಾಜಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ನಿರೂಪಿಸಿದರು. ಸದಸ್ಯರಾದ ಸೃಜನಿ, ಮಧುಶ್ರೀ ಪ್ರಶಾಂತ್ ಪ್ರಾರ್ಥನೆ ನಡೆಸಿಕೊಟ್ಟರು
