ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಮಾಜದಲ್ಲಿ ದೊರೆತ ಜವಾಬ್ದಾರಿ ಮತ್ತು ಸೇವೆಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ವ್ಯಕ್ತಿ ನಿಷ್ಠೆ ಹೊಂದಿದಾಗ ಸಮಾಜದಲ್ಲಿ ಜನಾನುರಾಗಲು ಸಾಧ್ಯ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ  ವ್ಯಕ್ತಪಟ್ಟಿದ್ದಾರೆ.


ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಬುಧವಾರ ನಡೆದ ನಿವೃತ್ತ ಜಾನುವಾರು ಅಭಿವೃದ್ದಿ ಅಧಿಕಾರಿ ಡಾ .ಶ್ರೀಧರ ಶೆಟ್ಟಿಯವರಿಗೆ ಗೌರವರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತಾನಾಡಿದ ಅವರು  ವೈದ್ಯ ವೃತ್ತಿಯಲ್ಲಿ ನಿವೃತ್ತಿ ಎಂಬುದು ಸರಕಾರಿ ದಾಖಲೆಗೆ ಮಾತ್ರ ಸೀಮಿತ ಹೊರತು ವಾಸ್ತವದಲ್ಲಿ ನಿತ್ಯ ನಿರಂತರ ಸೇವೆಯೊಂದಿಗೆ ಸಂತಸ ಕಾಣುವ ವೃತ್ತಿ ವೈದ್ಯ ವೃತ್ತಿಯಾಗಿದೆ  ಎಂದರು.


ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ , ನಿರ್ದೇಶಕರಾದ ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ ಮಾತಾನಾಡಿ ಶುಭ ಹಾರೈಸಿದರು.
ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ ಅಲಕ್ಕೆ , ಚಂದ್ರಶೇಖರ ಶೆಟ್ಟಿ , ವಿಶ್ವನಾಥ ಶೆಟ್ಟಿಗಾರ್ , ಮಂದಾರತಿ ಎಸ್ ಶೆಟ್ಟಿ , ಪುಷ್ಪಲತಾ ಎಸ್ ಆರ್ , ವೀರಪ್ಪ ಪರವ ,ಜಾರಪ್ಪ ನಾಯ್ಕ , ಎ ಶಿವ ಗೌಡ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ , ಬೊಲ್ಪು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ರಾಜಾ ಬಂಟ್ವಾಳ ಉಪಸ್ಥಿತರಿದ್ದರು .
ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು . 

By suddi9

Leave a Reply

Your email address will not be published. Required fields are marked *