ಬಂಟ್ವಾಳ : ನಗೆ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು,ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಯಾವಾಗಲೂ ನಗುನಗುತಾ ಇರಲು‌ ಸಲಹೆ   ನೀಡುತ್ತಾರೆ.  ತುಳು ನಾಟಕ ಮತ್ತು ಸಿನಿಮಾಗಳಲ್ಲು ಹಾಸ್ಯ ಇದ್ದರೇ ಮಾತ್ರ ಅಂತಹ ಸಿನಿಮಾವನ್ನು ಪ್ರೇಕ್ಷಕರು  ಕೂಡ ಅಪೇಕ್ಷಿಸುತ್ತಿದ್ದು, ದಿನನಿತ್ಯದ ಬದುಕಿನ ಜಂಜಾಟಕ್ಕೆ ಒಂದಷ್ಟು ಹೊತ್ತು ಮುಕ್ತಿ ನೀಡಲು ಇಂತಹ ನಗೆಕೂಟ ಅನಿವಾರ್ಯವಾಗಿದೆ ಎಂದು ಚಲನಚಿತ್ರನಟ, ಚಾಪರ್ಕ ತಂಡ ಕಲಾವಿದ ಸುರೇಶ್ ಕುಲಾಲ್ ಬಿ.ಸಿ.ರೋಡು ತಿಳಿಸಿದರು.

 ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ  ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ನಡೆದ ‘ಹ… ಹ… ಹ.. ನಗೆ ಕೂಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಈಗಿನ ಕಾಲಕ್ಕೆ ನಗೆಯೂ ಮನುಷ್ಯನ ನೆಮ್ಮದಿಯ ಜೀವನದ ಒಂದು ಭಾಗವಾಗಿದೆ. ನಗೆಯಿಂದಲೇ ಎಷ್ಟೋ ರೋಗಗಳು ದೂರವಾಗುತ್ತದೆ. ಅದಕ್ಕಾಗಿ ಬಂಟ್ವಾಳ ಕುಲಾಲ ಸಂಘದ ವತಿಯಿಂದ  ಪ್ರತೀ ಭಾನುವಾರ  ನಗೆಕೂಟ ನಡೆಸಲು ನಿರ್ಧರಿಸಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಿರಿ ಎಂದು ತಿಳಿಸಿದರು.     

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ

  ಯೋಗ ಶಿಕ್ಷಕ ಕಿಶೋರ್ ಕೈಕುಂಜೆ ನಗುವಿನಿಂದಾಗುವ ಲಾಭ, ಯೋಗದಲ್ಲಿರುವ ನಗೆಯ ವಿಧಾನ, ಯೋಗ ನಡಿಗೆಯ ಬಗ್ಗೆ ತರಬೇತಿ ನೀಡಿದರು.
 ಜತೆಕಾರ್ಯದರ್ಶಿ ಸತೀಶ್ ಸಂಪಾಜೆ ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷ ನಾರಾಯಣ ಪೆರ್ನೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ಕಾರ್ಯಕ್ರಮ  ನಿರೂಪಿಸಿದರು.ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ , ಕಾರ್ಯಕಾರಿ ಸಮಿತಿ ಸದಸ್ಯರು, ಕುಲಾಲ ಸೇವಾದಳದ ಮತ್ತು ಮಹಿಳಾ ಘಟಕದ ಸದಸ್ಯರು  ಸಹಕರಿಸಿದರು.

By Suddi9

Leave a Reply

Your email address will not be published. Required fields are marked *