ಬಂಟ್ವಾಳ: ರೈತರ ಸಾಲ ಮನ್ನಾ ಬಾಕಿ ಮೊತ್ತ ಬಿಡುಗಡೆಗೊಳಿಸುವಂತೆ ಕರ್ನಾಟಕ ಸರಕಾರದ ಸಹಕಾರ ಸಚಿವರಾರ ರಾಜಣ್ಣ ಅವರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ.ದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.


ಕರ್ನಾಟಕ ಸರಕಾರವು 2018-19 ನೇ ಸಾಲಿನಲ್ಲಿ ರೈತರು ಪಡೆದಿರುವ ಬೆಳೆ ಸಾಲಗಳ ಪೈಕಿ ಒಂದು ಲಕ್ಷವನ್ನು ಮನ್ನಾ ಮಾಡಿ ಆದೇಶಿಸಿತ್ತು. ಇದರಂತೆ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಪಡೆದಿರುವ ರೈತರ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮನ್ನಾ ಯೋಜನೆಗೆ ಅರ್ಹರಾದ ಪೈಕಿ ಬಹುತೇಕ ರೈತರಿಗೆ ಸಾಲಮನ್ನಾ ಹಣವನ್ನು ಸರಕಾರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿರುತ್ತದೆ.


ಆದರೆ ಈ ರೀತಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಯೋಜನೆಗೆ ಅರ್ಹವಾದ ಹಲವಾರು ರೈತರಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗಿರುವುದಿಲ್ಲ  ಎಂದು ಒ್ರಭು ಅವರು ಸಚಿವರಿಗೆ ರವಾನಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.ಈ ಬಗ್ಗೆ ಸಾಲ ಮನ್ನಾ ಹಣ ಬಿಡುಗಡೆಯಾಗದೇ ಇರುವ ರೈತ ಸದಸ್ಯರೆಲ್ಲಾ ದಿನಂಪ್ರತಿ  ಪ್ರಾಥಮಿಕ ಸಹಕಾರ ಸಂಘಕ್ಕಾಗಮಿಸಿ  ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಸಂಗಗಳು ವಿವಿದೆಡೆಯಲ್ಲಿ ನಡೆಯುತ್ತಿದೆ ಎಂದು ಅವರು‌ ಮನವಿಯಲ್ಲಿ  ವಿವರಿಸಿದ್ದಾರೆ.

ಸಾಲಮನ್ನಾ ಬಗೆಗಿನ ಹಣವನ್ನು ಸರಕಾರ ಬಿಡುಗಡೆ ಮಾಡದೇ ಸರಕಾರದ ಸಹಕಾರ ಇಲಾಖೆ ಮಾಡಿರುವ ಎಡವಟ್ಟಿಗೆ ಕೆಳಹಂತದಲ್ಲಿರುವ ಪ್ರಾಥಮಿಕ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ಉತ್ತರಿಸಲಾಗದ ಪರಿಸ್ಥಿತಿ ಉದ್ಭವಿಸಿದ್ದು,ಹಾಗಾಗಿ ಬಾಕಿ ಉಳಿದಿರುವ ರೈತರ ಸಾಲ ಮನ್ನಾ ಹಣವನ್ನು ಅತೀ ಶೀಘ್ರವಾಗಿ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.


ಮನವಿಯ ಪ್ರತಿಯನ್ನು ಸರಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು  ಸಹಕಾರ ಸಂಘಗಳ ನಿಬಂಧಕರಿಗು ರವಾನಿಸಿದ್ದಾರೆ. 

By suddi9

Leave a Reply

Your email address will not be published. Required fields are marked *