ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ( ರಿ.) ಬಂಟ್ವಾಳ, ದ. ಕ.ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನಲ್ಕೇಮಾರ್ ಇದರ ಸಂಯುಕ್ತಾಶ್ರಯದಲ್ಲಿ ಪರಿಸರ ಮಾಹಿತಿ ಹಾಗೂ ಗಿಡನಾಟಿ ಕಾರ್ಯಕ್ರಮ  ಶುಕ್ರವಾರ ಜರಗಿತು.

ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಎಂ ಪರಿಸರದ ಬಗ್ಗೆ ಮಾಹಿತಿ ನೀಡಿದರು. 


ಕಾರ್ಯಕ್ರಮದಲ್ಲಿ  ಒಕ್ಕೂಟದ ಅಧ್ಯಕ್ಷರಾದ ಥಾಮಸ್ ಸಲ್ದಾನ, ಬಿಸಿ ರೋಡು ವಲಯದ ಮೇಲ್ವಿಚಾರಕಿ ವೇದಾವತಿ,  ಸೇವಾ ಪ್ರತಿನಿಧಿ  ವಿಜಯಲಕ್ಷ್ಮಿ, ಶಾಲಾಭಿವೃದ್ಧಿ  ಸಮಿತಿಯ ಅಧ್ಯಕ್ಷ   ಯೋಗೀಶ್,  ಶಾಲಾ ಮುಖ್ಯ ಶಿಕ್ಷಕಿ  ಜ್ಯೋತಿ ಕುಮಾರಿ , ಶಾಲಾ  ಶಿಕ್ಷಕ ವೃಂದ, ಒಕ್ಕೂಟದ ಸದಸ್ಯರು  ಉಪಸ್ಥಿತರಿದ್ದರು.
ಶಶಿಕಲಾ ಸ್ವಾಗತಿಸಿ ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ವಂದಿಸಿ,ರೇಖಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಶಾಲಾ ಆವರಣದಲ್ಲಿ ಗಿಡನಾಟಿ ಮಾಡಲಾಯಿತು. 

By suddi9

Leave a Reply

Your email address will not be published. Required fields are marked *