ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಜೋಸ್ಸಿ ಮೆಲ್ವಿನ್ ವೇಗಸ್ ಎಂಬವರ ಮನೆಯ ಮೇಲೆ ಗುಡ್ಡ ಕುಸಿದು ಸಂಪೂರ್ಣ ಹಾನಿಗಿಡಾದ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆಗೈದರು.

ಬಳಿಕ ಮನೆ ಹಾನಿಗೊಳಗಾದ ಕುಟುಂಬಕ್ಕೆಅಗತ್ಯ ಪರಿಹಾರ ಒದಗಿಸುವಂತೆ ಕಂದಾಯಾಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು.ಈ ಸಂದರ್ಭದಲ್ಲಿ ಅಮ್ಟಾಡಿ ಗ್ರಾ. ಪಂಚಾಯತ್ ಅಧ್ಯಕ್ಷರಾದ ವಿಜಯ್ ಕುಮಾರ್, ಬಿಜೆಪಿ ಬಂಟ್ವಾಳ ಮಂಡಲದ ಪ್ರ. ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕರೋಪಾಡಿ,ಸ್ಥಳೀಯ ಪ್ರಮುಖರಾದ ಬಬಿತ ಕೋಟ್ಯಾನ್, ಯೋಗೀಶ್ ಅಮ್ಟಾಡಿ,ಮೋಹಿನಿ ಅಮ್ಟಾಡಿ ಮತ್ತಿತರರು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

ಧಾರಾಕಾರ ಮಳೆಯ ಪರಿಣಾಮ ಜೋಸ್ಸಿ ಮೆಲ್ವಿನ್ ವೇಗಸ್ ಅವರ ಮನೆ ಪಕ್ಕದ ಗುಡ್ಡದ ಮಣ್ಣು ಜರಿದು ಮನೆಗೆ ಸಂಪೂರ್ಣ ಹಾನಿಯಾಗಿದ್ದು,ಸದ್ಯ ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಘಟನೆಯಿಂದ ಯಾವುದೇ ಜೀವಹಾನಿ ಸಂಭವಿಸದಿದ್ದು,ಮನೆಯೊಳಗಿದ್ದ ಸೊತ್ತುಗಳ ಸಹಿತ ಸಾಮಾಗ್ರಿಗಳು ಮಣ್ಣಿನಡಿಗೆ ಸಿಲುಕಿದ್ದು,ಅಪಾರ ನಷ್ಟ ಉಂಟಾಗಿದೆ.
