ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಮಳೆ ಚುರುಕುಗೊಂಡಿದ್ದು, ಮಂಗಳವಾರ ಒಂದಷ್ಟು ವಿರಾಮವಿತ್ತು ಉಳಿದಂತೆ ಧಾರಕಾರವಾಗಿ ಮಳೆ ಸುರಿದಿದೆ.ಪರಿಣಾಮ ಕೆಲವು ಗ್ರಾಮಗಳಲ್ಲಿ ಹಾನಿಯು ಸಂಭವಿಸಿದೆ.ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದಬೆಟ್ಟು ಮೋಹಿನಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದ್ದರೆ.

ಪಾಣೆಮಂಗಳೂರು ಗ್ರಾಮದ ಸೌಮ್ಯ ಎಂಬವರ ವಾಸ್ತವ್ಯದ ಮನೆಗೆ ಗಾಳಿ,ಮಳೆಗೆ ತೀವ್ರತರದ ಹಾನಿಯಾಗಿರುತ್ತದೆ.
ಬಿಳಿಯೂರು ಗ್ರಾಮದ ದರ್ಕಾಸು ಎಂಬಲ್ಲಿ ಬಲ್ಲೆದಿ ಎಂಬವರ ವಾಸ್ತವ್ಯದ ಕಚ್ಚಾ ಮನೆಗೆ ಹಾನಿಯಾಗಿದ್ದು,ಇವರ ಮನೆಯವರನ್ನು ಮುಂಜಾಗ್ರತಾಕ್ರಮವಾಗಿ ಪಕ್ಕದ ಮನೆಗೆ ಸ್ಥಳಾಂತರಗೊಳಿಸಲಾಗಿದೆ.

ಅರಳ ಗ್ರಾಮದ ಮೂಲರಪಟ್ಟಣ ಎಂಬಲ್ಲಿ ಜೀನತ್ ರವರ ವಾಸ್ತ್ಯವ್ಯದ ಮನೆಯ ಬದಿಗೆ ಆವರಣ ಗೋಡೆ ಬಿದ್ದಿದ್ದು ಮನೆಯ ಗೋಡೆ ಭಾಗಶಃ ಹಾನಿಯಾಗಿರುತ್ತದೆ.ಮನೆ ಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರಗೊಳಿಸಲಾಗಿದೆ.

ಪಾಣೆಮಂಗಳೂರು ಗ್ರಾಮದ ಅಬ್ದುಲ್ ರಝಾಕ್ ಎಂಬವರ ಮನೆಯ ಆವರಣಗೋಡೆಗೆ ಹಾನಿಯಾಗಿರುತ್ತದೆ.
ವ್ಯಾಪಕ ಮಳೆಯ ಹಿನ್ನಲೆಯಲ್ಲಿಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಲಾಗಿತ್ತು.
ನೇತ್ರಾವತಿ ನದಿಯಲ್ಲಿಯು ಬೆಳಗ್ಗಿನ ಹೊತ್ತು 3.8 ಮೀ.ನಲ್ಲಿ ಹರಿಯುತಿತ್ತು.ತುಂಬೆ ಮತ್ತು ಜಕ್ರಿಬೆಟ್ಟು ಡ್ಯಾಂನಲ್ಲಿ ನಿಗದಿತ ಮಟ್ಟದಲ್ಲಿನೀರು ಶೇಖರಿಸಿ ಹೆಚ್ಚುವರಿ ನೀರನ್ನು ಕೆಲ ಗೇಟನ್ನು ತೆರವುಗೊಳಿಸಿ ಕಳಭಾಗಕ್ಕೆ ಬಿಡಲಾಗಿತ್ತು.
