ಮಜಿ ವೀರಕಂಬ ಶಾಲೆಯಲ್ಲಿ ಅಗ್ನಿ ನಂದಕದ ಪ್ರಾತ್ಯಕ್ಷಿಕೆ
ಬಂಟ್ವಾಳ : ತರಗತಿಯ ಒಳಗೆ ಕಲಿಯುವ ಪಠ್ಯ ವಿಷಯಗಳು ಕೇವಲ ಸಿದ್ದಾಂತವನ್ನುಷ್ಟೇ ಕಲಿಸುತ್ತದೆ, ಆದರೆ ತರಗತಿಯ ಹೊರಗೆ ನಿತ್ಯ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಪ್ರಾಯೋಗಿಕ ಜ್ಞಾನವು ಮುಖ್ಯವಾಗಿದೆ ಈ ರೀತಿಯಾಗಿ ಅಗ್ನಿ ನಂದಕವನ್ನು ಬಳಸುವ ವಿಚಾರ ಪ್ರತಿಯೊಬ್ಬನಿಗೂ ತಿಳಿದಿರಬೇಕು ನಿತ್ಯ ಜೀವನದಲ್ಲಿ ಅದರ ಉಪಯೋಗವನ್ನು ಮಾಡುವ ವಿಧಾನವು ತಿಳಿದಾಗ ಅಪಾಯದ ಸಂದರ್ಭದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಮಜಿ ಶಾಲೆಯ ದೈಹಿಕ ಶಿಕ್ಷಕ ಇಂದುಶೇಖರ್ ಹೇಳಿದರು.

ವೀರಕಂಬಗ್ರಾಮದ ಮಜಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ, ಅಡುಗೆ ಸಿಬ್ಬಂದಿಗಳಿಗೆ, ಅಗ್ನಿನಂದಕದ ಪ್ರಾತ್ಯಕ್ಷಿಕೆಯನ್ನು ನಡೆಸುವ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಗೆ ಉಚಿತ ತರಕಾರಿ ಪೂರೈಸುತ್ತಿರುವ ಮೆಲ್ಕಾರ್ ಚಂದ್ರಿಕಾ, ವೆಜಿಟೇಬಲ್ ಮಾಲಕ ಮೊಹಮ್ಮದ್ ಶರೀಫ್, ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.



