ಬಂಟ್ವಾಳ: ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜ ರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು, ಮುಖ್ಯಸ್ಥರಾದ ಡಾ. ಲಿನು ಸರ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಫೆಕ್ಟಿವ್ ನೆಸ್ ಆಫ್ ಸೆಲ್ಫ್ ಕೇರ್ ಎಜ್ಯುಕೇಷನ್ ಪ್ರಾಗ್ರೇಮ್ ಆನ್ ಕ್ಲಿನಿಕಲ್ ಆವ್ಟ್ ಕಮ್ಸ್ ಆಂಡ್ ಸೆಲ್ಫ್ ಕೇರ್ ಬಿಹೇವಿಯರ್ ಎಮಾಂಗ್ ಹಾರ್ಟ್ ಪೇಲೂರ್ ಕೇಸಸ್” ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಎಕಾಡಮಿ ಆಫ್ ಹೈಯರ್ ಎಜ್ಯಕೇಷನ್ ವಿ ವಿ ಯು ಪಿಎಚ್. ಡಿ. ಪದವಿ ಪ್ರದಾನ ಮಾಡಿದೆ.

ಇವರು ಅಮೇರಿಕನ್ ಯುನಿವರ್ಸಿಟಿ ಆಫ್ ಆಂಟಿಗ್ವಾದಲ್ಲಿ ಪ್ರಾಧ್ಯಾಪಕರಾಗಿರುವಡಾ. ಜೇಮ್ಸ್ ಗೋನ್ಸಾಲ್ವಿಸ್ ರವರ ಪತ್ನಿಯಾಗಿದ್ದು,ಬಂಟ್ವಾಳ ಸಮೀಪದ ಲೊರೆಟ್ಟೋ ಕುಪ್ರಾಡಿಯ ಸಿರಿಲ್ ಡಿಸೋಜ ಹಾಗೂ ದಿವಂಗತ ಲೂಸಿ ಡಿಸೋಜ, ಕುಪ್ರಾಡಿ ಲೊರೆಟೊ ರವರ ಪುತ್ರಿಯಾಗಿದ್ದಾರೆ.
