ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಿ: ರೋ.ರಾಘವೇಂದ್ರ ಭಟ್ ಕಿವಿಮಾತು
ಬಂಟ್ವಾಳ: ದೇಶದ ಇತಿಹಾಸದಲ್ಲಿ ಕಾಣುವಂತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ನಾಯಕನಾಗಲೂ ಸಾಧ್ಯ ಎಂದು ರೋಟರಿ ಜಿಲ್ಲಾ ಮಾಜಿ ಅಸಿಸ್ಟೆಂಟ್ ಗವರ್ನರ್ ರೋ.ರಾಘವೇಂದ್ರ ಭಟ್ ಹೇಳಿದ್ದಾರೆ.

ಬಂಟ್ವಾಳ ತಾ.ನ ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ 2025- 26 ನೇ ಸಾಲಿನ ನೂತನ ವಿದ್ಯಾರ್ಥಿ ಸಂಘ ಹಾಗೂ ಇತರ ಸಹ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು ಮಾತನಾಡಿ ವಿದ್ಯಾರ್ಥಿಗಳು ಗುರು- ಹಿರಿಯರಿಗೆ ವಿಧೇಯರಾಗಿದ್ದುಕೊಂಡು ಮನೆಯಲ್ಲಿ ಹೆತ್ತವರ, ಪೋಷಕರ ಅರೈಕೆ ಮುಡುವುದರ ಜೊತೆಗೆ ಅವರನ್ನು ಗೌರವಿಸಿ ಸಮಾಜವನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಉದಯಕುಮಾರ್ ಇವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶೀನಪ್ಪ ಎನ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ನಾಯಕ ಪವನ್ ವಂದಿಸಿದರು. ಉಪನ್ಯಾಸಕರಾದ ಸಂಜಯ್ ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.



